ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಜರಂಗದಳ ಮುಖಂಡನ ಮೇಲೆ ಹಲ್ಲೆ ಯತ್ನ, ಬಂಧನ

Last Updated 10 ಜನವರಿ 2023, 20:13 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾಗರ ಪಟ್ಟಣದಲ್ಲಿ ಬಜರಂಗದಳ ಸಹ ಸಂಚಾಲಕ ಸುನಿಲ್ ಮೇಲೆ ಸೋಮವಾರ ಕತ್ತಿಯಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿ ಸಮೀರ್ ಹಾಗೂ ಆತನ ಗೆಳೆಯರಾದ ಇಮಿಯಾನ್ ಹಾಗೂ ಮನ್ಸೂರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಿ.ಸಿ.ಟಿ.ವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಗೆ ಕೋಮು ಬಣ್ಣ ಪಡೆದುಕೊಂಡಿದ್ದರಿಂದ ಮಂಗಳವಾರ ಬಜರಂಗದಳದ ನೇತೃತ್ವದಲ್ಲಿ ಸಾಗರ ಪಟ್ಟಣ ಬಂದ್ ಮಾಡಿ ಪ್ರತಿಭಟಿಸಲಾಗಿತ್ತು. ಶಾಸಕ ಹರತಾಳು ಹಾಲಪ್ಪ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವೈಯಕ್ತಿಕ ಜಗಳ ಕಾರಣ: ‘ಬಜರಂಗ ದಳ ಸಹ ಸಂಚಾಲಕ ಸುನಿಲ್ ಮೇಲೆ ಸಮೀರ್ ನಡೆಸಿದ ಹಲ್ಲೆ ಯತ್ನಕ್ಕೆ ವೈಯಕ್ತಿಕ ಜಗಳ ಕಾರಣ ಹೊರತು ಕೋಮು ದ್ವೇಷವಲ್ಲ’ ಎಂದು ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್ ಮಂಗಳವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ತಂಗಿಯನ್ನು ನಾಲ್ಕೈದು ತಿಂಗಳಿನಿಂದ ಸುನಿಲ್ ಚುಡಾಯಿಸುತ್ತಿದ್ದ. ಹಲವು ಬಾರಿಗೆ ಸುನಿಲ್‌ಗೆ ಎಚ್ಚರಿಕೆ ನೀಡಿದ್ದೆ. ತಂಗಿಯ ಫೋನ್‌ ನಂಬರ್ ಕೂಡ ಕೇಳಿದ್ದ. ಇದರಿಂದ ಕೋಪಗೊಂಡು ಹಲ್ಲೆಗೆ ಮುಂದಾಗಿದ್ದಾಗಿ ವಿಚಾರಣೆ ವೇಳೆ ಸಮೀರ್‌ ಮಾಹಿತಿ ನೀಡಿದ್ದಾನೆ’ ಎಂದು ಎಸ್‌ಪಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT