ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಗೆ ಸಂತ್ರಸ್ತೆ ವಿಡಿಯೊ: ಇನ್‌ಸ್ಪೆಕ್ಟರ್ ವಿರುದ್ಧ ವಕೀಲ‌ ಜಗದೀಶ ಗರಂ

Last Updated 31 ಮಾರ್ಚ್ 2021, 11:56 IST
ಅಕ್ಷರ ಗಾತ್ರ

ಬೆಂಗಳೂರು: 'ಸಿ.ಡಿ. ಪ್ರಕರಣದ ಸಂತ್ರಸ್ತೆ ವಿಡಿಯೊವನ್ನು ಸಂಸ್ಥೆ ಅಧಿಕಾರಿಗಳೇ ಚಿತ್ರೀಕರಣ ಮಾಡಿ ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ' ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ಕುಮಾರ್ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ ಅವರು, 'ಪೊಲೀಸರು ಸಂತ್ರಸ್ತೆ ವಿಡಿಯೊ ಚಿತ್ರೀಕರಣ ಮಾಡಿ, ನಿರ್ಭಯಾ ಪ್ರಕರಣದಲ್ಲಿ‌ ರೂಪಿಸಲಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ' ಎಂದರು.

'ಕಮಿಷನರ್, ಎಸ್ಐಟಿ ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಲು ಅನುಮತಿ ನೀಡಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು' ಎಂದರು.

ನಾನು ನಂದಿಯಲ್ಲ, ಜಗದೀಶ್: 'ನನ್ನ ಮೇಲಿನ ಹಿಂದಿನ ಪ್ರಕರಣಗಳನ್ನು ಎಸ್ಐಟಿ ಕೆದಕುತ್ತಿದೆ. ನನ್ನನ್ನು ಏಕೆ ರೌಡಿಶೀಟರ್ ಮಾಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳು, ಇನ್‌ಸ್ಪೆಕ್ಟರೊಬ್ಬರನ್ನು ತಮ್ಮ ಕಚೇರಿಗೆ ಕರೆಸಿ ಕೇಳಿದ್ದಾರೆ. ಓ‌ ಅಧಿಕಾರಿ ಎಚ್ಚರಿಕೆ‌ ಇರಲಿ, ನಾನು ನಂದಿಯಲ್ಲ, ಜಗದೀಶ. ನಿನ್ನ ಜಾತಕ ನನ್ನ ಬಳಿ ಇದೆ. ಬನ್ನಿ ಕಾನೂನು ಹೋರಾಟ ಮಾಡೋಣ. ನಾನು ರೆಡಿ' ಎಂದೂ ಹೇಳಿದರು.

'ಓ ಅಧಿಕಾರಿ, ನೀನು ಹೇಗೆ ನೇಮಕಾತಿ ಆದೆ. ವಿದ್ಯಾರಣ್ಯಪುರದಲ್ಲಿ ಹೇಗೆ ಮನೆ ಕಟ್ಟಿಸಿದೆ ಎಂಬುದೂ ಗೊತ್ತಿದೆ' ಎಂದೂ ತಿಳಿಸಿದರು.

'ಓ ಪೊಲೀಸರೇ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ‌ ಮಾಡಿ. ಕಕ್ಷಿದಾರರ ಫೋಟೊ ‌ಹಾಗೂ ವಿಡಿಯೊ ತೆಗೆದಿದ್ದು ಯಾರು. ಸಂತ್ರಸ್ತೆ ಟ್ರಾವೆಲ್ ಹಿಸ್ಟರಿ ‌ಹುಡುಕುತ್ತಿರಲ್ಲ. ನಿಮ್ಮ ಪೊಲೀಸರ ಮೊಬೈಲ್ ನೋಡಿ ಮೊದಲು' ಎಂದೂ ಹೇಳಿದರು.

'ನ್ಯಾಯಾಧೀಶರೇ ಗೌಪ್ಯವಾಗಿ ಯುವತಿ ಹೇಳಿಕೆ‌ ಪಡೆದಿದ್ದಾರೆ. ಅಂಥ ಜಾಗದಲ್ಲೇ ಯುವತಿ ಹಾಗೂ ಅವರ ಜೊತೆಗಿದ್ದ ವಕೀಲ ಸೂರ್ಯ ಮುಕುಂದರಾಜ್ ಅವರ ವಿಡಿಯೊವನ್ನು ಮಾಡಿದ್ದಾರೆ. ಇದು ನಿಯಮ ಉಲ್ಲಂಘನೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT