ಶುಕ್ರವಾರ, ಅಕ್ಟೋಬರ್ 29, 2021
20 °C

ನಾಡಗೀತೆ: ಅನಂತಸ್ವಾಮಿ ಧಾಟಿ ಅಧಿಕೃತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜಿಸಿರುವ ಧಾಟಿ ಯನ್ನೇ ನಾಡಗೀತೆಗೆ ಅಳವಡಿಸಿಕೊಳ್ಳಲು ತಜ್ಞರ ಸಮಿತಿ ಶಿಫಾರಸ್ಸು ಮಾಡಿದ್ದು,  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನೇ ಅಧಿಕೃತ ಎಂದು ಶನಿವಾರ ಪ್ರಕಟಿಸುವ ಸಾಧ್ಯತೆ ಇದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದಕ್ಕೆ ಸಂಬಂಧಿಸಿದ ಕಡತವನ್ನು ಬೊಮ್ಮಾಯಿ ಅವರಿಗೆ ಕಳುಹಿಸಿದೆ. ಈ ಕಡತಕ್ಕೆ ಸಹಿ ಆದ ತಕ್ಷಣವೇ ಮುಖ್ಯಮಂತ್ರಿಯವರೇ ಅಧಿಕೃತವಾಗಿ ಪ್ರಕಟಿಸ ಲಿದ್ದಾರೆ. ನಾಡಗೀತೆಯ ಅವಧಿ 2 ನಿಮಿಷ 14 ಸೆಕೆಂಡುಗಳಷ್ಟು ಇರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ರಚಿಸಿದ್ದ ಸಮಿತಿಯಲ್ಲಿ ಕವಿ ದೊಡ್ಡರಂಗೇಗೌಡ, ಎಚ್‌.ಆರ್‌.ಲೀಲಾವತಿ, ಕಸ್ತೂರಿ ಶಂಕರ್‌ ಸೇರಿ ಒಟ್ಟು 18 ಮಂದಿ ಇದ್ದರು. ಸಮಿತಿಯು ಒಮ್ಮತದಿಂದಲೇ ಅನಂತಸ್ವಾಮಿ ಧಾಟಿಯ ನಾಡಗೀತೆ ಅಳವಡಿಸಿಕೊ
ಳ್ಳಲು ಒಪ್ಪಿಗೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು