ಮಂಗಳವಾರ, ಮಾರ್ಚ್ 21, 2023
25 °C

ಆಸ್ತಿ ಮುಟ್ಟುಗೋಲು ಯಾರಿಂದಲೂ ಸಾಧ್ಯವಿಲ್ಲ: ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಹೊಸ ಪಕ್ಷ ಸ್ಥಾಪಿಸಿ 16 ದಿನಗಳಾಗುವಷ್ಟರಲ್ಲಿಯೇ ಸಿಬಿಐ ಆಸ್ತಿ ಮುಟ್ಟುಗೋಲಿಗೆ ಮುಂದಾಗಿದ್ದು, ಇದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಪಕ್ಷ ಸಂಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಜನರಿಗೆ ಮಾಹಿತಿ ನೀಡುತ್ತಿದ್ದೇನೆ. ಕೆಲವರು ಅವುಗಳನ್ನೇ ಹ್ಯಾಕ್‌ ಮಾಡಿಸಿ ಚುನಾವಣಾ ತಯಾರಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಜನರ ಪ್ರೀತಿ ಇರುವ ತನಕ ನನ್ನನ್ನು ಏನೂ ಮಾಡಲು ಆಗುವುದಿಲ್ಲ’ ಎಂದರು. 

‘ಬಂಧನದ ವೇಳೆ ಸಿಬಿಐ ನನ್ನಿಂದ ₹1,020ಕೋಟಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿತ್ತು. ಸದ್ಯ ₹4 ಸಾವಿರ ಕೋಟಿ ಆಸ್ತಿ ಜಪ್ತಿಯಾಗಿದ್ದರೂ ಚುನಾವಣೆ  ಖರ್ಚಿಗೆ ಯಾವುದೇ ಕಷ್ಟವಿಲ್ಲ’ ಎಂದರು.

‘ಯಾರನ್ನೂ ಹೆದರಿಸಿ ದುಡ್ಡು ಹೊಡೆದಿಲ್ಲ. ಸ್ವಂತ ಶ್ರಮದಿಂದ ಗಳಿಸಿದ ಆಸ್ತಿ ಅದು. ಜೈಲಿನಲ್ಲಿ ಕಿರಿದಾದ ಕೊಠಡಿಯಲ್ಲಿ ನಾಲ್ಕು ವರ್ಷ ವನವಾಸ ಕಳೆದು ಬಂದಿದ್ದು, ಯಾರಿಗೂ ಹೆದರುವುದಿಲ್ಲ. ಅಕ್ರಮ ಆಸ್ತಿ ಪ್ರಕರಣದ ಆರೋಪದಿಂದ ಮುಕ್ತನಾಗುವೆ. ನಂತರವೇ ಉಸಿರು ಬಿಡುವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು