ಶುಕ್ರವಾರ, ಏಪ್ರಿಲ್ 23, 2021
28 °C

ಯತ್ನಾಳ ಪತ್ರದ ತನಿಖೆ ಏಕಿಲ್ಲ: ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮಗೆ ಪಕ್ಷ ‌ನೀಡಿದ್ದ ನೋಟಿಸ್‌ಗೆ ಕೊಟ್ಟಿರುವ ಉತ್ತರದಲ್ಲಿ ರಾಜ್ಯದಲ್ಲಿ ‌ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದಾರೆ‌. ಆ ಪತ್ರದ ಆಧಾರದ ಮೇಲೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳದ ಪ್ರಧಾನಿ ಮೋದಿ ಅವರಿಗೆ ಪಶ್ಚಿಮ ‌ಬಂಗಾಳ ಸರ್ಕಾರದ ಭ್ರಷ್ಟಾಚಾರ ಟೀಕಿಸಲು ಯಾವ ನೈತಿಕತೆ ಇದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ‌ಪ್ರಶ್ನಿಸಿದರು‌.

ಉಡಾಫೆಗೆ ಉತ್ತರ: ‘ಜೆಡಿಎಸ್ ರಾಜಕೀಯ ‌ಪಕ್ಷವೇ ಅಲ್ಲ ಎಂದು ‌ಸಿದ್ದರಾಮಯ್ಯ ಅವರು ಉಡಾಫೆ ಮಾತನಾಡಿದ್ದರು. ಅದಕ್ಕೇ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ‌ನಮ್ಮ ಶಕ್ತಿ ತೋರಿಸಬೇಕಾಯಿತು. ಕಾಂಗ್ರೆಸ್ ‌ಶಾಸಕ ತನ್ವೀರ್ ಸೇಠ್ ಅವರು ನನ್ನನ್ನು ಭೇಟಿ ‌ಮಾಡಿ‌ ಮನವಿ ಮಾಡಿದ್ದರಿಂದ ಸ್ಥಳೀಯವಾಗಿ ಮೈತ್ರಿಗೆ ಒಪ್ಪಿಕೊಂಡೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು