ಮಂಗಳವಾರ, ಸೆಪ್ಟೆಂಬರ್ 28, 2021
23 °C

ಸಚಿವ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಹಿರಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ಸಂಪುಟದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹಿರಿಯರಿದ್ದಾರೆ. 27 ಮಂದಿ ಸಚಿವರು 50 ವರ್ಷ ಮತ್ತು ಅದಕ್ಕಿಂತ ಹಿರಿಯರು. ಇಬ್ಬರು ಮಾತ್ರ 50ರ ಕೆಳಗಿನ ವಯೋಮಾನದವರು.

73 ವರ್ಷ ವಯಸ್ಸಾಗಿರುವ ಕೆ.ಎಸ್‌. ಈಶ್ವರಪ್ಪ ಈ ಸಂಪುಟದಲ್ಲಿರುವ ಅತ್ಯಂತ ಹಿರಿಯರು. ಅವರ ನಂತರ 72 ವರ್ಷ ವಯಸ್ಸಾಗಿರುವ ಗೋವಿಂದ ಕಾರಜೋಳ ಇದ್ದಾರೆ. ವಿ. ಸೋಮಣ್ಣ, ಆರಗ ಜ್ಞಾನೇಂದ್ರ ಮತ್ತು ಎಂ.ಟಿ.ಬಿ. ನಾಗರಾಜು ಮೂವರೂ 70 ವರ್ಷ ವಯಸ್ಸಿನವರು.

ಬಸವರಾಜ ಬೊಮ್ಮಾಯಿ ಅವರ ಸಂಪುಟದ ಸದಸ್ಯರಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾಗಿರುವ ಐವರು, 60ರಿಂದ 69 ವರ್ಷ ವಯಸ್ಸಿನ 11 ಮಂದಿ, 50ರಿಂದ 59 ವರ್ಷ ವಯಸ್ಸಿನ 11 ಮಂದಿ ಹಾಗೂ 40ರಿಂದ 49 ವರ್ಷ ವಯಸ್ಸಿನ ನಡುವಿನ ಇಬ್ಬರು ಇದ್ದಾರೆ.

ಕಾರ್ಕಳದ ವಿ. ಸುನೀಲ್‌ ಕುಮಾರ್‌ (45) ಈ ಸಂಪುಟದ ಅತ್ಯಂತ ಕಿರಿಯ ಸದಸ್ಯ. ಅವರ ನಂತರ ಸಚಿವ ಡಾ.ಕೆ. ಸುಧಾಕರ್‌ (48) ಇದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು