ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಬಿಜೆಪಿಯಲ್ಲಿನ ಸಂಘ ಪರಿವಾರ- ಜನತಾ ಪರಿವಾರಗಳ ಕಿತ್ತಾಟ ಮುಗಿಯದು: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯೊಳಗಿನ ಸಂಘ ಪರಿವಾರ ಮತ್ತು ಜನತಾ ಪರಿವಾರಗಳ ನಡುವಿನ ಕಿತ್ತಾಟ ಮುಗಿಯದು ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ಕುರಿತು ಬುಧವಾರ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ವಲಸಿಗರೇ ಎಲ್ಲಾ ಅಧಿಕಾರ ಅನುಭವಿಸುತ್ತಿರುವಾಗ ಮೂಲ ಬಿಜೆಪಿಗರು ಸುಮ್ಮನಿರುವುದಾದರೂ ಹೇಗೆ' ಎಂದು ಪ್ರಶ್ನಿಸಿದೆ.

'ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡದಂತೆ ಕಾಡುವುದು ನಿಶ್ಚಿತ. ಯಡಿಯೂರಪ್ಪ ಅವರನ್ನೇ ಬಿಡದವರು ಬೊಮ್ಮಾಯಿಯವರನ್ನು ಬಿಡುವರೇ?' ಎಂದು ಕಾಂಗ್ರೆಸ್‌ ಟ್ವೀಟಿಸಿದೆ.

'ಬಿಜೆಪಿಯೊಳಗಿನ ಸಂಘಪರಿವಾರ ಮತ್ತು ಜನತಾ ಪರಿವಾರಗಳ ನಡುವಿನ ಕಿತ್ತಾಟ ಮುಗಿಯದು' ಎಂದು ಕಾಂಗ್ರೆಸ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು