ಬೆಂಗಳೂರು: ಕೋವಿಡ್ ಪೀಡಿತರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಲು ಬೆಡ್ ಸಿಗದೇ ಪರದಾಡಿದ ಘಟನೆ ನಡೆದಿದೆ.

ಬಸವಕಲ್ಯಾಣ ಚುನಾವಣಾ ಪ್ರಚಾರ ಮುಗಿಸಿ ಬಂದ ಅವರ ಆರೋಗ್ಯ ವ್ಯತ್ಯಯವಾಗಿದ್ದರಿಂದಾಗಿ ಬೆಂಗಳೂರಿಗೆ ವಾಪಾಸ್ ಆದವರು ಮನೆಗೆ ಹೋಗದೇ ಹೋಟೆಲ್ನಲ್ಲೇ ಉಳಿದುಕೊಂಡಿದ್ದರು. ಶನಿವಾರ ಬೆಳಿಗ್ಗೆ ಆರೋಗ್ಯ ತಪಾಸಣೆಗೆ ಒಳಗಾದಾಗ ಕೋವಿಡ್ ದೃಢ ಪಟ್ಟಿದೆ. ವೈದ್ಯರನ್ನು ಸಂಪರ್ಕಿಸಿದಾಗ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದಾರೆ.

ಆಸ್ಪತ್ರೆ ಸಂಪರ್ಕಿಸಿದಾಗ ಬೆಡ್ ಲಭ್ಯವಿಲ್ಲ ಎಂಬ ಮಾಹಿತಿ ಬಂದ ಬಳಿಕ, ತೋಟದ ಮನೆಯಲ್ಲಿ ಪ್ರತ್ಯೇಕವಾಸ ಮಾಡಬಹುದೇ ಎಂದು ವೈದ್ಯರ ಸಲಹೆ ಕೇಳಿದ್ಧಾರೆ. ಅದಕ್ಕೆ ಅವರ ಕುಟುಂಬ ವೈದ್ಯರು ಒಪ್ಪಿಗೆ ನೀಡಿಲ್ಲ.

ಇದನ್ನೂ ಓದಿ–ಕೋವಿಡ್: ಮುಖ್ಯಮಂತ್ರಿ ಬಿಎಸ್ವೈ ಆರೋಗ್ಯ ಸ್ಥಿರ

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇರುವ ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಲ್ಲದೇ , ಖಾಸಗಿ ಆಸ್ಪತ್ರೆಯೊಂದಕ್ಕೆ ಮಾತನಾಡಿ ಬೆಡ್ ವ್ಯವಸ್ಥೆ ಮಾಡಿರುವುದಾಗಿ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.