ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತಾರ ನೀಡಲು ಲಂಚ: ಬಿಲ್‌ ಕಲೆಕ್ಟರ್‌ ಎಸಿಬಿ ಬಲೆಗೆ

Last Updated 6 ಆಗಸ್ಟ್ 2020, 8:20 IST
ಅಕ್ಷರ ಗಾತ್ರ

ಬೆಳಗಾವಿ: ಅರ್ಜಿದಾರರೊಬ್ಬರಿಗೆ ಹೊಸ ಉತಾರ ನೀಡಲು ಲಂಚ ಪಡೆಯುತ್ತಿದ್ದ ಚಿಕ್ಕೋಡಿ ತಾಲ್ಲೂಕು ಸದಲಗಾ ಪುರಸಭೆಯ ಬಿಲ್‌ ಕಲೆಕ್ಟರ್‌ ಅಶೋಕ ಹೆಗಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

‘ಸದಲಗಾದ ಶಿವಾನಂದ ಕರಂಗಳೆ ಅವರು ಆಶ್ರಯ ಮನೆಗೆ ಸಂಬಂಧಿಸಿದಂತೆ ಉತಾರ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಬಿಲ್ ಕಲೆಕ್ಟರ್‌ ₹ 15ಸಾವಿರ ಲಂಚ ಕೇಳಿದ್ದರು. ಕೊನೆಗೆ ₹ 9ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಶಿವಾನಂದ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಲಂಚದ ಹಣ ಪಡೆಯುವಾಗ ಸರ್ಕಾರಿ ನೌಕರನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಉತ್ತರ ವಲಯ ಎಸ್ಪಿ ಬಿ.ಎಸ್. ನೇಮಗೌಡ ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ಗಳಾದ ಎಚ್. ಸುನೀಲ್‌ಕುಮಾರ್‌, ಎ.ಎಸ್. ಗೂದಿಗೊಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT