ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Election 2023- ಸುಳ್ಳಿನ ಕಾರ್ಖಾನೆ ಬಿರುಸಾಗುತ್ತಿದೆ: ಸಿದ್ದರಾಮಯ್ಯ

Last Updated 18 ಜನವರಿ 2023, 15:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಧಾನಿ ಮೋದಿಯವರಿಗೆ ಕರ್ನಾಟಕ ನೆನಪಾಗಿದೆ. ಪದೇ ಪದೇ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದರ ಜತೆಯಲ್ಲೇ ಬಿಜೆಪಿಯ ಸುಳ್ಳಿನ ಕಾರ್ಖಾನೆಯೂ ಬಿರುಸಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶ ಆರ್ಥಿಕವಾಗಿ ಕುಸಿದಿದೆ. ಹಣದುಬ್ಬರ ನಿಯಂತ್ರಣಕ್ಕೆ ಸಿಗದೆ ಮೇಲೇರುತ್ತಿದೆ. ದೇಶವನ್ನು ಆಡಳಿತಾತ್ಮಕವಾಗಿ ಸೋಲಿಸಿದ್ದಾರೆ. ಆದರೆ, ಬಿಜೆಪಿಯ ಸುಳ್ಳಿನ ಕಾರ್ಖಾನೆಗಳು ಪ್ರಧಾನಿ ಭೇಟಿ ವೇಳೆ ಹೊಸ ಸುಳ್ಳು ಸೃಷ್ಟಿಸಲು ಸಿದ್ಧವಾಗಿವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡು ಬಾರಿ ಜನರು ಕೊಟ್ಟ ಬಹುಮತಕ್ಕೆ ಮೋದಿ ಅವಮಾನ, ಅನ್ಯಾಯ ಮಾಡಿದ್ದಾರೆ. ಕೆಲವೇ ಮಂದಿ ಕಾರ್ಪೋರೇಟ್‌ ಧಣಿಗಳಷ್ಟೇ ಸಂಭ್ರಮಿಸುವ ಪರಿಸ್ಥಿತಿ ದೇಶದಲ್ಲಿದೆ. ಆದರೆ, ತೆರಿಗೆ ಹೇರಿಕೆಯನ್ನೂ ಜನರ ಒಳಿತಿಗಾಗಿ ಮಾಡಲಾಗಿದೆ ಎಂದು ನಂಬಿಸಿ ಜನರನ್ನು ಕುರಿ ಮಾಡಲು ಬಿಜೆಪಿಯವರು ಸಜ್ಜಾಗಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT