ತುಮಕೂರು:ಶಿವಕುಮಾರ ಸ್ವಾಮೀಜಿ ಅವರನ್ನು ಈ ನಾಡು ಪಡೆದದ್ದೇ ಧನ್ಯ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಶಿವಕುಮಾರ ಸ್ವಾಮೀಜಿ ಅವರ ಎರಡನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಶ್ರೀಗಳುಇಡೀ ಬದುಕಿನಲ್ಲಿ ತನು ಮನ ಧನವನ್ನು ಸಮಾಜಕ್ಕೆ ಅರ್ಪಿಸಿಕೊಂಡರು. ಕರ್ಪೂರ ತನ್ನ ಸುಟ್ಟುಕೊಂಡು ಬೆಳಕು ನೀಡಿದಂತೆ ಅವರು ತಮ್ಮನ್ನು ಸುಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದರು.89 ವರ್ಷ ಪೀಠದ ಅಧಿಕಾರ ವಹಿಸಿಕೊಂಡಿದ್ದರು. ಅವರು ಕಾಯಕ ಮತ್ತು ದಾಸೋಹ ಬಸವಣ್ಣ ಕೊಟ್ಟ ತತ್ವಗಳು. ಅವುಗಳನ್ನು ಸ್ವಾಮೀಜಿ ತಪ್ಪದೆ ಪಾಲಿಸಿದರು ಎಂದರು.

ಆತ್ಮ ನಿರ್ಭರ ಭಾರತ ಈಗ ಹೇಳುತ್ತಿದ್ದಾರೆ. ಆದರೆ, ಬಸವಣ್ಣ ಅಂದೇ ಆ ಪರಿಕಲ್ಪನೆ ಕೊಟ್ಟಿದ್ದರು.ಕಾಯವೂ ಕೈಲಾಸಎನ್ನುವುದನ್ನು ಶ್ರೀಗಳಲ್ಲಿಕಾಣಬಹುದಿತ್ತು.ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಮಾತ್ರ ನಾಡು ಅಭಿವೃದ್ಧಿ ಎನ್ನುವ ಗಾಂಧೀಜಿ ಅವರ ಆಶಯವನ್ನು ಸ್ವಾಮೀಜಿ ಸಾಕಾರಗೊಳಿಸಿದರುಎಂದು ಹೇಳಿದರು.

ಮಠದಲ್ಲಿ ಎಷ್ಟೇ ಮಕ್ಕಳು ಬಂದರೂ ಶಿಕ್ಷಣ ನೀಡಿದರು. ಕೊಠಡಿ ಕೊರತೆ ಆದಾಗ ತಾವು ಇದ್ದ ಕೊಠಡಿಯನ್ನೇ ಬಿಟ್ಟು ಕೊಟ್ಟರು.ಮಠದಲ್ಲಿ ಅವರ ಕಣ್ಣಿನ ಎದುರು ಮಕ್ಕಳುಮತ್ತು ದನಗಳು ಓಡಾಡಬೇಕಾಗಿತ್ತು. ಆಗ ಅವರಿಗೆ ಸಂತೋಷ ಆಗುತಿತ್ತು ಎಂದು ನೆನಪಿಸಿಕೊಂಡರು.

ಯಡಿಯೂರಪ್ಪ ಅವರು ಸ್ವಾಮೀಜಿ ಅವರ ಅಂತರಂಗದ ಶಿಷ್ಯ.ಯಡಿಯೂರಪ್ಪ ಅವರ ಮುಖ ನೋಡಿದರೆ ಸ್ವಾಮೀಜಿ ಅವರಿಗೆ ಖುಷಿ ಆಗುತ್ತಿತ್ತು.ರೈತ ಪರವಾದ ಚಿಂತನೆಯನ್ನು ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ. ಪೂಜ್ಯರ ಆಶೀರ್ವಾದ ಅವರಿಗೆ ಎಂದೂ ಇರಲಿ ಎಂದು ಆಶಿಸಿದರು.

ವೀರಾಪುರದ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದೂಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.