ಬುಧವಾರ, ಜೂನ್ 23, 2021
24 °C

ಪಿಎಂ ಕಿಸಾನ್‌ ಯೋಜನೆ ರಾಜ್ಯಕ್ಕೆ ₹985.61 ಕೋಟಿ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದ 53.36 ಲಕ್ಷ ರೈತರ ಖಾತೆಗಳಿಗೆ ಒಟ್ಟು
₹ 985.61 ಕೋಟಿ ಬಿಡುಗಡೆ ಆಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್‌ ಸಮ್ಮಾನ್ ಯೋಜನೆಯಡಿಯ 8 ನೇ ಕಂತಿನ ಹಣವನ್ನು ಶುಕ್ರವಾರ ಬಿಡುಗಡೆ ಮಾಡಿದರು. ಈ ಯೋಜನೆಯಡಿ ಕೇಂದ್ರ ಸರ್ಕಾರ ವರ್ಷಕ್ಕೆ ₹6 ಸಾವಿರ ಮೊತ್ತವನ್ನು ರೈತರ ಖಾತೆಗಳಿಗೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಜಮೆ ಮಾಡುತ್ತದೆ.

2019 ರಿಂದ 2021ರ ಮಾರ್ಚ್‌ವರೆಗೆ ರಾಜ್ಯದ 55.06 ಲಕ್ಷ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಒಟ್ಟು ₹6936. 98 ಕೋಟಿ ಜಮೆ ಮಾಡಿದೆ.

ಕೇಂದ್ರ ಸರ್ಕಾರ ‘ಕಿಸಾನ್ ಸಮ್ಮಾನ್’ ಯೋಜನೆಯಡಿ ಒಬ್ಬ ರೈತರಿಗೆ ₹6 ಸಾವಿರ ನೀಡುವ ಜತೆಗೆ ರಾಜ್ಯ ಸರ್ಕಾರವೂ ವರ್ಷಕ್ಕೆ ಪ್ರತಿ ರೈತನಿಗೆ ತಲಾ ₹ 4 ಸಾವಿರ ನೀಡುತ್ತಿದೆ. ಹೀಗಾಗಿ, ಕರ್ನಾಟಕದ ರೈತರಿಗೆ ₹10 ಸಾವಿರ ಸಿಗುತ್ತಿದೆ.

ಇಲ್ಲಿಯವರೆಗೆ ₹2,891.70 ಕೋಟಿಯನ್ನು ರೈತರ ಖಾತೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು