ಗುರುವಾರ , ಅಕ್ಟೋಬರ್ 22, 2020
24 °C

ಶೀಘ್ರ ಡ್ರಗ್‌‌ ಜಾಲ ಶೀಘ್ರ ಭೇದಿಸಲಿ: ಎಚ್‌.ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಬೇರೆಯವರಿಗಿಂತ, ರಾಜಕಾರಣಿಗಳ ಮಕ್ಕಳು ಬೇಗ ಮಾದಕ ವಸ್ತುಗಳ ವ್ಯಸನಿಗಳಾಗುವ ಅಪಾಯವಿದ್ದು, ಸರ್ಕಾರ ಶೀಘ್ರವೇ ಡ್ರಗ್‌‌ ಜಾಲವನ್ನು ಭೇದಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌. ವಿಶ್ವನಾಥ್‌ ಸೋಮವಾರ ಇಲ್ಲಿ ಆಗ್ರಹಿಸಿದರು.

‘ರಾಜಕಾರಣಿಗಳ ಮಕ್ಕಳು ಆರ್ಥಿಕವಾಗಿ ಹೆಚ್ಚು ಸಬಲರಾಗಿರುತ್ತಾರೆ. ಬಹುಬೇಗ ಇಂಥ ಜಾಲದೊಳಗೆ ಸಿಲುಕಿಕೊಳ್ಳುವ ಅಪಾಯವಿರುತ್ತದೆ. ಈ ಜಾಲವನ್ನು ಭೇದಿಸದಿದ್ದರೆ ನಮ್ಮ ಮಕ್ಕಳೇ ಹಾಳಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಡ್ರಗ್‌‌ ಮಾಫಿಯಾ ತಡೆಗೆ ಸಂಘ ಸಂಸ್ಥೆಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು