ಮಂಗಳವಾರ, ಸೆಪ್ಟೆಂಬರ್ 29, 2020
22 °C

ಡಿ.ಜೆ. ಹಳ್ಳಿ ಗಲಭೆ: ದೇವಸ್ಥಾನ ರಕ್ಷಣೆ ಕೂಡ ಒಂದು ನಾಟಕ ಎಂದ ಸಚಿವ ಸಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

C C Patil

ಗದಗ: ‘ಡಿ.ಜೆ.ಹಳ್ಳಿ ಗಲಭೆ ಕಾವಲ್‌ಭೈರಸಂದ್ರಕ್ಕೆ ವಿಸ್ತರಣೆಯಾದ ಸಂದರ್ಭದಲ್ಲಿ ಅನ್ಯ ಕೋಮಿನ ಯುವಕರು ಹಿಂದೂ ದೇಗುಲ ರಕ್ಷಣೆ ಮಾಡಿದ್ದು ಕೂಡ ಒಂದು ನಾಟಕ’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ್‌ ಇಲ್ಲಿ ಟೀಕಿಸಿದರು.

‘ಹಿಂದೂ ದೇಗುಲವನ್ನು ಹಾಳು ಮಾಡಲು ಹೊರಟಿದ್ದು ಯಾವ ಸಮುದಾಯದವರು? ಆ ದೇವಸ್ಥಾನವನ್ನು ಯಾರಿಂದ, ಯಾರು ರಕ್ಷಣೆ ಮಾಡಿದರು? ರಾಜ್ಯದ ಜನತೆಗೆ ಎಲ್ಲವೂ ತಿಳಿದಿದೆ. ನಾಟಕ ಆಡಲು ಒಂದು ಇತಿ ಮಿತಿ ಇರಬೇಕು’ ಎಂದು ಕಿಡಿಕಾರಿದರು.

ನಂತರ ಅವರ ಮಾತು ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರತ್ತ ಹೊರಳಿತು.
‘ಒಬ್ಬೊಬ್ಬರಿಗೂ ಒಂದೊಂದು ಆಶಯ ಇರುತ್ತದೆ. ಶಾಸಕ ಜಮೀರ್‌ಗೆ ಆ ಸಮುದಾಯಕ್ಕೆ ತಾನೇ ಅಗ್ರಗಣ್ಯ ನಾಯಕನಾಗಬೇಕು ಎಂಬ ಆಸೆ ಇದೆ. ಅದಕ್ಕಾಗಿ ಈ ರೀತಿ ಮಾಡುತ್ತಾರೆ. ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಜೈಲು ಸೇರಿದ್ದ ಆರೋಪಿಗಳು ಬೇಲ್‌ ಮೇಲೆ ಹೊರಬಂದ ಸಂದರ್ಭದಲ್ಲಿ ಇದೇ ಜಮೀರ್‌ ಸನ್ಮಾನ ಮಾಡಿದ್ದರು. ಅವರೇನು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರೇ? ಸಾರ್ವಜನಿಕ ಜೀನವಕ್ಕೆ ಭಂಗ ತಂದು, ಆಸ್ತಿ ಪಾಸ್ತಿ ನಷ್ಟ ಮಾಡಿದ ಕಿಡಿಗೇಡಿಗಳನ್ನು ಸನ್ಮಾನಿಸುವುದು ಜಮೀರ್‌ ಮನಸ್ಥಿತಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ ಪಕ್ಷ ಕೇವಲ ಮತಬ್ಯಾಂಕ್‌ ರಾಜಕಾರಣ ಮಾಡುತ್ತಿದೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು