ಕರ್ನಾಟಕದಲ್ಲೂ ಇದ್ದವು ಚೀತಾ

ಬೆಂಗಳೂರು: ಚೀತಾಗಳು ಈ ಹಿಂದೆ ಕರ್ನಾಟಕದಲ್ಲೂ ಇದ್ದವು ಎನ್ನುತ್ತವೆ ಐತಿಹಾಸಿಕ ದಾಖಲೆಗಳು ಮತ್ತು ಸಾಹಿತ್ಯ ಕೃತಿಗಳು. 2019ರ ಜುಲೈನಲ್ಲಿ ಪ್ರಕಟವಾಗಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಜರ್ನಲ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.
ಬಾಂಬೆ ನ್ಯಾಚುರಲ್ ಹಿಸ್ಟರಿಯ ಜರ್ನಲ್‌ನಲ್ಲಿ ದಿವ್ಯಭಾನು ಸಿಂಹ ಮತ್ತು ರಾಜಾ ಕಾಸ್ಮಿ ಅವರು ಬರೆದಿರುವ ಲೇಖನದಲ್ಲಿ ಕರ್ನಾಟಕದಲ್ಲಿ ಚೀತಾ ಗಳಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ. ಮೈಸೂರಿನ ಟಿಪ್ಪು ಸುಲ್ತಾನ್ ಒಟ್ಟು 16 ಚೀತಾಗಳನ್ನು ಸಾಕಿದ್ದ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಅರಣ್ಯ ಸಚಿವಾಲಯವು ಸಿದ್ಧಪಡಿಸಿರುವ ‘ಪ್ರಾಜೆಕ್ಟ್ ಚೀತಾ’ ವರದಿಯಲ್ಲೂ, ಈ ಹಿಂದೆ ಕರ್ನಾಟಕದಲ್ಲಿ ಚೀತಾಗಳಿದ್ದವು ಎಂದು ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ರಾಜ್ಯದ ಯಾವ ಭಾಗಗಳಲ್ಲಿ ಚೀತಾಗಳಿದ್ದವು ಎಂಬುದನ್ನು ಗುರುತಿಸಲಾಗಿದೆ. ಕೇಂದ್ರ ಅರಣ್ಯ ಸಚಿವಾಲಯದ ‘ಭಾರತಕ್ಕೆ ಚೀತಾಗಳ ಮರುಪರಿಚಯ ಕಾರ್ಯ ಯೋಜನೆ’ ವರದಿಯಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲೂ ಚೀತಾಗಳ ಆವಾಸಕ್ಕೆ ಯೋಗ್ಯವಾದ ಪರಿಸರವಿರುವ ಪ್ರದೇಶಗಳಿವೆ ಎಂದು ಗುರುತಿಸಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿಯಲ್ಲಿ ಇಂತಹ ಪ್ರದೇಶವಿದೆ ಎಂದು ನಕ್ಷೆಯಲ್ಲಿ ಗುರುತಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.