ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಸಿ.ಡಿ ಪ್ರಕರಣ: ಯುವತಿಯ ದೂರಿನ ಎಫ್ಐಆರ್ ತನಿಖೆ ಎಸ್ಐಟಿಗೆ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ.ಯಲ್ಲಿದ್ದಾರೆ ಎನ್ನಲಾದ ‌ಯುವತಿ‌ ನೀಡಿದ್ದ ದೂರು ಆಧರಿಸಿ ದಾಖಲಾದ ಎಫ್ಐಆರ್ ತನಿಖೆ ಜವಾಬ್ದಾರಿಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವರ್ಗಾಯಿಸಲಾಗಿದೆ.

ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

'ಕೆಲಸ ಕೊಡಿಸುವುದಾಗಿ ನಂಬಿಸಿದ್ದ ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ' ಎಂದು ಆರೋಪಿಸಿ ವಕೀಲ ಕೆ.ಎನ್. ಜಗದೀಶಕುಮಾರ್ ಮೂಲಕ‌ ಯುವತಿ ಕಬ್ಬನ್ ಪಾರ್ಕ್ ಠಾಣೆಗೆ ದೂರು‌ ನೀಡಿದ್ದರು.

ತನಿಖೆ ಆರಂಭಿಸಿದ್ದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಆರೋಪಿ ರಮೇಶ ಜಾರಕಿಹೊಳಿ ವಿಚಾರಣೆಯನ್ನೂ ಸೋಮವಾರ ನಡೆಸಿದ್ದರು. ಅವರ ವಿಚಾರಣೆ ಬಳಿಕ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ಹಸ್ತಾಂತರಿಸಲಾಗಿದೆ.

'ರಮೇಶ ಜಾರಕಿಹೊಳಿ ದೂರು ಆಧರಿಸಿ ಸದಾಶಿವನಗರ ಠಾಣೆಯಲ್ಲಿ ದಾಖಲಾದ ಪ್ರಕರಣ, ಯುವತಿ‌ ನೀಡಿದ್ದ ದೂರಿನಡಿ ದಾಖಲಾದ ಪ್ರಕರಣ ಹಾಗೂ ಬೆಳಗಾವಿಯಲ್ಲಿ ಯುವತಿ ಪೋಷಕರು ದಾಖಲಿಸಿದ್ದ ಪ್ರಕರಣದ‌ ತನಿಖೆಯನ್ನು ಎಸ್ಐಟಿ ‌ಮಾಡುತ್ತಿದೆ' ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು