ಮೈಸೂರು: ‘2ಬಿ ಮೀಸಲಾತಿ ರದ್ದು ಮಾಡಿರುವುದು, ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಹುನ್ನಾರ’ ಎಂದು ಶಾಸಕ ತನ್ವೀರ್ ಸೇಠ್ ಶನಿವಾರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಮೀಸಲಾತಿ ರದ್ದು ಮಾಡಿರುವುದು ದ್ವೇಷ, ಸೇಡಿನ ರಾಜಕಾರಣ. ‘ಚುನಾವಣೆ ದೃಷ್ಟಿಯಿಂದ ಘೋಷಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದರೆ ರದ್ದುಪಡಿಸುತ್ತೇವೆ’ ಎಂದರು. ‘ಬಿಜೆಪಿ ಸರ್ಕಾರ ಮುಸ್ಲಿಮರನ್ನಷ್ಟೇ ಅಲ್ಲದೆ ದಲಿತರನ್ನೂ ವಂಚಿಸಿದೆ. ಜಾತಿ ಒಡೆಯಲು ಮುಂದಾಗಿದೆ. ಮೀಸಲಾತಿ ಆಮಿಷವೊಡ್ಡಿ ಅನ್ಯಾಯ ಮಾಡುತ್ತಿದೆ‘ ಎಂದು ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.