ಗುರುವಾರ , ಮಾರ್ಚ್ 30, 2023
24 °C

Covid-19 Karnataka Update | 3.51 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಾದ್ಯಂತ ಮಂಗಳವಾರ ಒಂದೇ ದಿನ 9,058 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 135 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

‌ಇದರೊಂದಿಗೆ ಒಟ್ಟು ಸೋಕಿತರ ಸಂಖ್ಯೆ 3,51,481ಕ್ಕೆ ಏರಿಕೆಯಾಗಿದ್ದು, ಇದುವರೆಗೆ 5,837 ಮಂದಿ ಸಾವಿಗೀಡಾಗಿದ್ದಾರೆ.

5159 ಮಂದಿ ಇಂದು ಬಿಡುಗಡೆಯಾಗಿದ್ದು, ಈವರೆಗೆ 2,54,626 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 90,999 ಸಕ್ರಿಯ ಪ್ರಕರಣಗಳಿದ್ದು, 762 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇಂದು ಬೆಂಗಳೂರಿನಲ್ಲಿ 2,967 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 40 ಮಂದಿ ಕೊನೆಯುಸಿರೆಳೆದಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,32,092ಕ್ಕೆ ತಲುಪಿದೆ. ಈವರೆಗೆ 1,137 ಮಂದಿ ಮೃತಪಟ್ಟಿದ್ದಾರೆ. 

ಮೈಸೂರಿನಲ್ಲಿ 737, ಹಾಸನ 461, ಬಳ್ಳಾರಿ 393, ದಕ್ಷಿಣ ಕನ್ನಡ 352, ತುಮಕೂರು 327, ಬೆಳಗಾವಿ 316, ದಾವಣಗೆರೆ 289, ರಾಯಚೂರು 245, ಶಿವಮೊಗ್ಗ 233, ಕಲಬುರ್ಗಿ 220, ಚಿಕ್ಕಮಗಳೂರು 210, ಧಾರವಾಡ ಜಿಲ್ಲೆಯಲ್ಲಿ 199 ಪ್ರಕರಣಗಳು ದೃಢಪಟ್ಟಿವೆ. 

83670 ಜನರಿಗೆ ಕೋವಿಡ್ ಟೆಸ್ಟ್
ಮಂಗಳವಾರ ಒಂದೇ ದಿನ ಒಟ್ಟು 83670 ಮಂದಿಗೆ ಕೋವಿಡ್–19 ಮಾದರಿ‌ ಪರೀಕ್ಷೆ ನಡೆಸಲಾಗಿದ್ದು, ಇದುವರೆಗೆ ಒಟ್ಟು 29,79,477 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 51987 ಆ್ಯಂಟಿಜೆನ್‌ ಪರೀಕ್ಷೆ ಮತ್ತು 31683 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು