ಬೆಂಗಳೂರು: ರಾಜ್ಯದಲ್ಲಿ ಸೋಮವಾರ 998 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಬರೋಬ್ಬರಿ ಐದು ತಿಂಗಳ ನಂತರ 1 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ.

ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 2,209 ಮಂದಿ ಗುಣಮುಖರಾಗಿದ್ದು, 13 ಸೋಂಕಿತರು ಸಾವಿಗೀಡಾಗಿದ್ದಾರೆ.

ಈ ಹಿಂದೆ ಜೂನ್ನಲ್ಲಿ ದಿನವೊಂದಕ್ಕೆ ಒಂದು ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ನಂತರ ಭಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ 11 ಸಾವಿರ ಸಮೀಪಿಸಿದ್ದವು. ಹತ್ತಕ್ಕೂ ಹೆಚ್ಚು ಬಾರಿ ಈ ಸಂಖ್ಯೆ 10 ಸಾವಿರ ದಾಟಿದ್ದವು. ಆದರೆ, ಅಕ್ಟೋಬರ್ ಎರಡನೇ ವಾರದಿಂದ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ನವೆಂಬರ್ ಮೊದಲ ವಾರ ಮೂರು ಸಾವಿರಕ್ಕೆ, ಎರಡನೇ ವಾರ ಎರಡು ಸಾವಿರಕ್ಕೆ ಇಳಿಕೆಯಾಗಿದ್ದವು. ಶನಿವಾರ 1,522 ಇದ್ದ ಪ್ರಕರಣಗಳು, ಭಾನುವಾರ 1,291ಕ್ಕೆ ಇಳಿಕೆಯಾಗಿದ್ದವು.

ಬೆಂಗಳೂರಿನಲ್ಲಿ ಹೊಸದಾಗಿ 444 ಪ್ರಕರಣಗಳು ವರದಿಯಾಗಿದ್ದು, 6 ಜನ ಸಾವಿಗೀಡಾಗಿದ್ದಾರೆ. ಹಾವೇರಿ 123 ಪ್ರಕರಣಗಳು ವರದಿಯಾಗಿವೆ. ಒಂಬತ್ತು ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣ, 11 ಜಿಲ್ಲೆಗಳಲ್ಲಿ 20ಕ್ಕೂ ಕಡಿಮೆ ಪ್ರಕರಣ, ಬಾಕಿ ಜಿಲ್ಲೆಗಳಲ್ಲಿ 50ಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿವೆ.

23 ಜಿಲ್ಲೆಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಒಟ್ಟಾರೆ ಇಲ್ಲಿಯವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 8.84 ಲಕ್ಷ ಮುಟ್ಟಿದೆ. ಈ ಪೈಕಿ 8.49 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 11,778 ಸೋಂಕಿತರ ಮೃತಪಟ್ಟಿದ್ದಾರೆ. ಗುಣಮುಖ ದರ ಶೇ.96 ರಷ್ಟಿದ್ದು, ಮರಣ ದರ ಶೇ.1.3 ರಷ್ಟಿದೆ. 23,279 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.