ಬುಧವಾರ, ಅಕ್ಟೋಬರ್ 21, 2020
26 °C

Covid-19 Karnataka Update: 8,191 ಮಂದಿಗೆ ಸೋಂಕು, 87 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus testing

ಬೆಂಗಳೂರು: ರಾಜ್ಯದಾದ್ಯಂತ 24 ಗಂಟೆ ಅವಧಿಯಲ್ಲಿ 8,191 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. 87 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಸಂಜೆ ತಿಳಿಸಿದೆ.

ಈವರೆಗೆ ರಾಜ್ಯದಲ್ಲಿ ಸೋಂಕಿತರಾದವರ ಸಂಖ್ಯೆ 7,26,106ಕ್ಕೆ ಏರಿಕೆಯಾಗಿದ್ದು, 10,123 ಜನ ಸಾವಿಗೀಡಾಗಿದ್ದಾರೆ. 6,02,505 ಸೋಂಕಿತರು ಗುಣಮುಖರಾಗಿದ್ದಾರೆ.

ಇಂದು (ಮಂಗಳವಾರ) 10,421 ಜನ ಚೇತರಿಸಿಕೊಂಡಿದ್ದಾರೆ. 919 ಸೋಂಕಿತರಿಗೆ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾಜ್ಯಲ್ಲಿ ಒಟ್ಟು 1,13,459 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಒಂದೇ ದಿನ 3,776 ಜನರು ಸೋಂಕಿತರಾಗಿದ್ದು, 28 ಮಂದಿ ಅಸುನೀಗಿದ್ದಾರೆ. 63,789 ಸಕ್ರಿಯ ಪ್ರಕರಣಗಳಿವೆ.

ಸೋಂಕು ಪ್ರಕರಣಗಳ ಜಿಲ್ಲಾವಾರು ವಿವರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು