ಭಾನುವಾರ, ಜೂನ್ 20, 2021
21 °C

ಬೆಂಗಳೂರು ತಲುಪಿದ 120 ಟನ್‌ ಆಮ್ಲಜನಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕ ಸಿಗದೆ ಕೋವಿಡ್‌ ರೋಗಿಗಳು ಸಾವಿನ ಕದ ತಟ್ಟುತ್ತಿರುವ ಮಧ್ಯೆಯೇ, ಒಡಿಶಾದ ಟಾಟಾನಗರದಿಂದ ಸೋಮವಾರ ನಸುಕಿನ 3 ಗಂಟೆಗೆ ಹೊರಟ ಒಟ್ಟು 120 ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಕಂಟೈನರ್‌ಗಳನ್ನು ಹೊತ್ತ ರೈಲು ಮಂಗಳವಾರ ಬೆಳಿಗ್ಗೆ ವೈಟ್‌ಫೀಲ್ದ್‌ ತಲುಪಿದೆ.

ರೈಲು ಅತ್ಯಂತ ತುರ್ತು ಆಗಿ ತಲುಪಬೇಕೆಂಬ ಉದ್ದೇಶದಿಂದ ಗ್ರೀನ್‌ ಕಾರಿಡಾರ್‌ ಕಲ್ಪಿಸಲಾಗಿತ್ತು. ತಲಾ 20 ಟನ್‌ನಂತೆ ದ್ರವೀಕೃತ ವೈದ್ಯಕೀಯ ಆಮ್ಲಜನಕ ತುಂಬಿದ ಆರು ಕಂಟೈನರ್‌ಗಳ ರೈಲು ವೈಟ್‌ಫೀಲ್ಡ್‌ನಲ್ಲಿರುವ ಇನ್‌ಲ್ಯಾಂಡ್‌ ಕಂಟೈನರ್‌ ಡಿಪೋ (ಐಸಿಡಿ) ತಲುಪಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್‌, ‘ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಇದರಿಂದ ಅನುಕೂಲ ಆಗಲಿದೆ’ ಎಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಟ್ವೀಟ್‌ ಮಾಡಿ, ಸಕಾಲಿಕ ನೆರವಿಗೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು