Covid-19 Karnataka Update: ರಾಜ್ಯದಲ್ಲಿ 10 ಸಾವಿರಕ್ಕೆ ಇಳಿದ ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 755 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 1.14 ಲಕ್ಷ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇವರಲ್ಲಿ 755 ಜನರಿಗೆ ಸೋಂಕು ದೃಢಪಟ್ಟಿದೆ. ಇಂದು ಒಂದೇ ದಿನ 976 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ಪ್ರಕರಣಗಳ ಸಂಖ್ಯೆ 9.22 ಲಕ್ಷ ಮುಟ್ಟಿದ್ದು, ಈ ಪೈಕಿ 8.98 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಸೋಂಕಿನಿಂದ 12,099 ಮಂದಿ ಸಾವಿಗೀಡಾಗಿದ್ದು, 10,834 ಪ್ರಕರಣಗಳು ಸಕ್ರಿಯವಾಗಿವೆ.
ಇಂದಿನ 02/01/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@DKShivakumar @Tejasvi_Surya @BYVijayendra @Ramesh_aravind @PuneethRajkumar @CovidIndiaSeva @iaspankajpandey @KarnatakaVarthe @PIBBengaluru @kiranshaw @WFRisinghttps://t.co/OiTRFsMo6J pic.twitter.com/i48eqPpZVX
— K'taka Health Dept (@DHFWKA) January 2, 2021
ಪ್ರಸ್ತುತ 186 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ದೃಢಪಟ್ಟ 343 ಪ್ರಕರಣಗಳು, ಮೈಸೂರಿನಲ್ಲಿ 78, ದಕ್ಷಿಣ ಕನ್ನಡ 37, ಚಿಕ್ಕಬಳ್ಳಾಪುರದಲ್ಲಿ 28 ಹಾಗೂ ಉತ್ತರ ಕನ್ನಡದಲ್ಲಿ 28 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ.
ಗದಗ 1, ಯಾದಗಿರಿ 2, ದಾವಣಗೆರೆ 4, ಚಿತ್ರದುರ್ಗದಲ್ಲಿ 5 ಪ್ರಕರಣಗಳು ವರದಿಯಾಗಿವೆ. ರಾಮನಗರದಲ್ಲಿ ಯಾವುದೇ ವರದಿಯಾಗಿಲ್ಲ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.