ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka Update: ಪಾಸಿಟಿವಿಟಿ ದರ ಶೇ 1.29, ಮರಣ ಪ್ರಮಾಣ ಶೇ 1.98

ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಪೈಕಿ ಮಂಗಳವಾರ 29 ಮಂದಿ ಅಸುನೀಗಿದ್ದಾರೆ. ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ನಂತರ ವರದಿಯಾದ ಕನಿಷ್ಠ ಪ್ರಕರಣ ಇದಾಗಿದೆ. ಇದರೊಂದಿಗೆ ಮರಣ ಪ್ರಮಾಣ ದರ ಶೇ 1.98ಕ್ಕೆ ಇಳಿದಿದೆ.

ಏಪ್ರಿಲ್ ಎರಡನೇ ವಾರದ ನಂತರ ರಾಜ್ಯದಲ್ಲಿ ಮೃತರ ಸಂಖ್ಯೆ 50ರ ಗಡಿ ದಾಟಿತ್ತು. ಬಳಿಕ ಏರಿಕೆ ಕಂಡು 500ರ ಗಡಿ ತಲುಪಿತ್ತು. ಆದರೆ ಹಿಂದಿನ ಒಂದು ತಿಂಗಳಿನಿಂದ ಈ ಸಂಖ್ಯೆ ಇಳಿಮುಖವಾಗಿದೆ. ಇದುವರೆಗೆ ಒಟ್ಟು 36,226 ಜನ ಈ ರೋಗದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಿದೆ. ಒಂದು ದಿನದಲ್ಲಿ ಹೊಸದಾಗಿ 1,464 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಸೋಂಕು ದೃಢ ಪ್ರಮಾಣವು ಶೇ 1.29ಕ್ಕೆ ಏರಿದೆ.

ಹಿಂದಿನ 24 ಗಂಟೆಗಳಲ್ಲಿ 2,706 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಚೇತರಿಸಿಕೊಂಡವರ ಒಟ್ಟು ಸಂಖ್ಯೆ 28.24 ಲಕ್ಷಕ್ಕೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿದಿದೆ. ಸದ್ಯ 26,256 ಮಂದಿ ಆಸ್ಪತ್ರೆ ಸೇರಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಗಳಲ್ಲೂ ಮೃತರ ಸಂಖ್ಯೆ ಇಳಿದಿದೆ. ಬೆಂಗಳೂರಿನಲ್ಲಿ 5 ಜನ ಅಸುನೀಗಿದ್ದಾರೆ. ದಕ್ಷಿಣ ಕನ್ನಡ, ಹಾಸನ ಮತ್ತು ಮೈಸೂರಿನಲ್ಲಿ ತಲಾ 3, ಹಾವೇರಿ, ಕೋಲಾರ, ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ 2 ಮರಣ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಹೊಸದಾಗಿ 352 ಜನರಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ, ಹಾಸನ ಹಾಗೂ ಮೈಸೂರಿನಲ್ಲಿ ಕ್ರಮವಾಗಿ 200, 108 ಮತ್ತು 117 ಮಂದಿ ಸೋಂಕಿತರಾಗಿದ್ದಾರೆ. 14 ಜಿಲ್ಲೆಗಳಲ್ಲಿ ಈ ಸಂಖ್ಯೆ ಎರಡಂಕಿಯಷ್ಟಿದೆ. ರಾಜ್ಯದಲ್ಲಿ ಈವರೆಗೆ 28.86 ಲಕ್ಷ ಜನ ಸೋಂಕಿಗೊಳಪಟ್ಟಂತಾಗಿದೆ.

ಕೋವಿಡ್‌ ಪರೀಕ್ಷೆಗಳನ್ನು ಮತ್ತಷ್ಟು ಇಳಿಸಲಾಗಿದೆ. ಒಂದು ದಿನದಲ್ಲಿ 1.13 ಲಕ್ಷ ಮಂದಿಯ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT