ಸೋಮವಾರ, ಜೂನ್ 21, 2021
29 °C

ರಾಜ್ಯದ 13 ನಗರಗಳಲ್ಲಿ ಆರ್‌ಎಸ್‌ಎಸ್‌ನಿಂದ ಕೋವಿಡ್‌ ಆರೈಕೆ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಸೇವಾ ಭಾರತಿ ಕರ್ನಾಟಕವು ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಿವೆ. 

ರಾಜ್ಯದ ಒಟ್ಟು 169 ಕೇಂದ್ರಗಳಲ್ಲಿ ಸಹಾಯವಾಣಿ ತೆರೆದು ಅವುಗಳ ಮೂಲಕ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿವೆ. ಒಟ್ಟು 346 ಸ್ಥಾನಗಳಲ್ಲಿ 10,771 ಮಂದಿಗೆ ಲಸಿಕೆ ನೀಡಲು ಸಹಕರಿಸಲಾಗಿದ್ದು, 253 ಇತರ ಕೇಂದ್ರಗಳಲ್ಲಿ ಲಸಿಕೆ ನೀಡುವ ಪ್ರಕ್ರಿಯೆಗೆ ಸಹಭಾಗಿತ್ವ ವಹಿಸಿವೆ.

ಇತರ ಕಾರ್ಯಗಳು

-13 ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ 1,121 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದಾಖಲಾದವರ ಪೈಕಿ ಒಟ್ಟು 650 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

-ಎರಡು ನಗರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸಿ, ಆಮ್ಲಜನಕ ಸೌಲಭ್ಯವಿರುವ 50 ಹಾಗೂ ಇತರ 110 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ದಾಖಲಾಗಿದ್ದವರ ಪೈಕಿ 130 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

-66 ನಗರಗಳ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 319 ಕಾರ್ಯಕರ್ತರು ವಿವಿಧ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.

-ಆನ್‌ಲೈನ್ ವೈದ್ಯ ಸಹಾಯವಾಣಿಯ ಮೂಲಕ 134 ಸ್ಥಾನಗಳಲ್ಲಿ 2,817 ಮಂದಿಗೆ ಸಲಹೆ ಮತ್ತು ನೆರವು ನೀಡಲಾಗಿದೆ. ಈ ಕಾರ್ಯಕ್ಕೆ 378 ವೈದ್ಯರು ಕೈಜೋಡಿಸಿದ್ದಾರೆ. 

-64 ಕಡೆಗಳಲ್ಲಿ 26,576 ಮಂದಿಗೆ ಆಹಾರದ ಕಿಟ್ ವಿತರಣೆ.

-ರಾಜ್ಯದಾದ್ಯಂತ 105 ಕಡೆಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಿ 9,388 ಯೂನಿಟ್ ರಕ್ತ ಸಂಗ್ರಹ.

-27 ಕಡೆಗಳಲ್ಲಿ ಪ್ಲಾಸ್ಮಾ ದಾನದ ವ್ಯವಸ್ಥೆ ಮಾಡಲಾಗಿದೆ. 151 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

-ರಾಜ್ಯದ 198 ಕಡೆ 6,895 ಮಂದಿಗೆ ಆಯುರ್ವೇದಿಕ್‌ ಕಷಾಯ ವಿತರಣೆ.

-ಮಾನಸಿಕ ಆರೋಗ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು 87 ಕಡೆ ಆಪ್ತ ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 3,325 ಮಂದಿ ಇದರ ಪ್ರಯೋಜನ ‍ಪಡೆದಿದ್ದಾರೆ.

-ರಾಜ್ಯದಾದ್ಯಂತ 158 ಪ್ರದೇಶ
ಗಳಲ್ಲಿ ಸಂಘದ ಸ್ವಯಂಸೇವಕರು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಿರ್ವಹಿಸಿದ್ದಾರೆ.

-93 ಸ್ಥಾನಗಳಲ್ಲಿ ಮೃತದೇಹ ಸಾಗಿಸಲು ಆಂಬುಲೆನ್ಸ್‌ ವ್ಯವಸ್ಥೆ. 

ಹೆಚ್ಚಿನ ಮಾಹಿತಿಗೆ: ಪ್ರವೀಣ್‌ ಪಟವರ್ಧನ್‌ 9845342972, ರಾಧಾಕೃಷ್ಣ ಹೊಳ್ಳ 9731264009.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು