ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಮೂರು ತಿಂಗಳಲ್ಲೇ ಕನಿಷ್ಠ ಸಂಖ್ಯೆ

Last Updated 31 ಅಕ್ಟೋಬರ್ 2020, 19:26 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶನಿವಾರ 3,014 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರಲ್ಲಿ 28 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇವು ಮೂರು ತಿಂಗಳಲ್ಲಿಯೇ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಸೋಂಕಿತರ ಹಾಗೂ ಮೃತರ ಕನಿಷ್ಠ ಪ‍್ರಕರಣಗಳಾಗಿವೆ.

ಈ ತಿಂಗಳ ಮೊದಲೆರಡು ವಾರ ಸೋಂಕಿತರ ಸಂಖ್ಯೆ ಬಹುತೇಕ ದಿನಗಳು 10 ಸಾವಿರದ ಗಡಿ ದಾಟಿದ್ದವು. ಕಡೆಯ ಎರಡು ವಾರಗಳಲ್ಲಿ ಇಳಿಮುಖ ಮಾಡಿದ್ದು, 3 ಸಾವಿರದ ಗಡಿಯ ಆಸುಪಾಸು ತಲುಪಿದೆ. 10 ದಿನಗಳ ಅವಧಿಯಲ್ಲಿ 40,639 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 4,063 ಮಂದಿ ಸೋಂಕಿತರಾಗಿದ್ದಾರೆ. ಅದಾಗಿಯೂ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8.23 ಲಕ್ಷಕ್ಕೆ ಏರಿಕೆಯಾಗಿದೆ.

ಮೃತರ ಸಂಖ್ಯೆ ಕೂಡ ಇಳಿಮುಖ ಕಂಡಿದ್ದು, 7 ದಿನಗಳ ಅವಧಿಯಲ್ಲಿ 295 ಮಂದಿ ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 42 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿ ನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 11,168ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT