ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆಗಾಗಿ ಜಿಲ್ಲಾಧಿಕಾರಿ ಮನೆ ಎದುರು ಪ್ರತಿಭಟನೆ

Last Updated 6 ಆಗಸ್ಟ್ 2021, 21:58 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಲಸಿಕೆ ನೀಡು ವಂತೆ ಆಗ್ರಹಿಸಿಸಾರ್ವಜನಿಕರು ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರ ಮನೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸೀಮಿತ ಪ್ರಮಾಣದ ಲಸಿಕೆ ಪೂರೈಕೆಯಾಗಿದ್ದು, ಕೆಲದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ನೂಕು ನುಗ್ಗಲು ಉಂಟಾಗುತ್ತಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಹಿಮ್ಸ್‌) ಲಸಿಕಾ ಕೇಂದ್ರದಲ್ಲಿ ‘ಲಸಿಕೆ ಲಭ್ಯವಿಲ್ಲ’ ಎಂಬ ಫಲಕ ಹಾಕಿದ್ದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಧರಣಿ ನಡೆಸಿ ದರು.ಹಲವರಿಗೆಗುರುವಾರವೇ ಟೋಕನ್‌ ನೀಡಲಾಗಿತ್ತು.

‘ಲಸಿಕೆ ಪಡೆಯುವಂತೆ ಸರ್ಕಾರವೇ ಜಾಗೃತಿ ಮೂಡಿಸುತ್ತಿದೆ. ಆದರೆ, ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಸುತ್ತಿಲ್ಲ. ನಿತ್ಯ ಸಾಲಿನಲ್ಲಿ ನಿಂತು ಹೋಗುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಗೆ ಪ್ರತಿದಿನ 15 ಸಾವಿರ ಡೋಸ್‌ ಲಸಿಕೆ ಅಗತ್ಯವಿದೆ. ಸದ್ಯ 2-3ಸಾವಿರ ಡೋಸ್ ಲಸಿಕೆ ಲಭ್ಯವಾಗುತ್ತಿದೆ. ಅಗತ್ಯ ಲಸಿಕೆ ಪೂರೈಸುವಂತೆ ಮನವಿಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT