ಮಂಗಳವಾರ, ಜನವರಿ 25, 2022
24 °C

Covid-19 Karnataka Update: ರಾಜ್ಯದಲ್ಲಿ ಪ್ರಕರಣಗಳು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಾಣು –ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದು ಕೊಂಡಿದ್ದು, ಶುಕ್ರವಾರ 413 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 29.97 ಲಕ್ಷ ದಾಟಿದೆ. 

ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಸದ್ಯ 6,896 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 256 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.52 ಲಕ್ಷ ದಾಟಿದೆ.

ಒಂದು ದಿನದ ಅವಧಿಯಲ್ಲಿ 1.05 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡ ಲಾಗಿದೆ. ಸೋಂಕು ದೃಢ ಪ್ರಮಾಣ ಶೇ 0.39 ರಷ್ಟು ದೃಢಪಟ್ಟಿದೆ. 7 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 12 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ.

ಕೋವಿಡ್‌ ಪರಿಹಾರ: ವಯಸ್ಸಿನ ನಿಬಂಧನೆ ಇಲ್ಲ

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಗಳಿಗೆ ತಲಾ ₹1 ಲಕ್ಷ ಪರಿಹಾರ ನೀಡುವ ಆದೇಶವನ್ನು ಮಾರ್ಪಾಡು ಮಾಡ ಲಾಗಿದ್ದು, ‘ಮೃತ ವ್ಯಕ್ತಿಯು ಕುಟುಂಬದ ದುಡಿಯುವ ಸದಸ್ಯನಾಗಿರಬೇಕು’ ಎಂಬ ಪದವನ್ನು ತೆಗೆದು ‘ಬಿಪಿಎಲ್‌ ಕುಟುಂಬದ ಸದಸ್ಯನಾಗಿದ್ದರೆ ಸಾಕು’ ಎಂದು ಸೇರಿಸಲಾಗಿದೆ.

ಈ ಹಿಂದಿನ ಆದೇಶದಲ್ಲಿ ‘ಬಿಪಿಎಲ್‌ ಕುಟುಂಬದ ದುಡಿಯುವ ಸದಸ್ಯನಾಗಿರಬೇಕು’ ಎಂದು ಷರತ್ತು ವಿಧಿಸಲಾಗಿತ್ತು. ಹೊಸ ಆದೇಶದಲ್ಲಿ ‘ಮೃತ ವ್ಯಕ್ತಿಯು ಬಿಪಿಎಲ್‌ ಕುಟುಂಬದ ಸದಸ್ಯನಾಗಿರಬೇಕು ಮತ್ತು  ವಯಸ್ಸಿನ ನಿಬಂಧನೆ ಇಲ್ಲದೇ ಕೋವಿಡ್‌ ಸೋಂಕಿನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಕುಟುಂಬಗಳ ಅರ್ಹ ಕಾನೂನು ಬದ್ಧ ವಾರಸುದಾರರಿಗೆ ₹ 1 ಲಕ್ಷ ಆರ್ಥಿಕ ನೆರವು ನೀಡಲಾಗುವುದು’ ಎಂದು ಕಂದಾಯ ಇಲಾಖೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು