ಭಾನುವಾರ, ಸೆಪ್ಟೆಂಬರ್ 27, 2020
27 °C

ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಮುಂದೆ ಬೆಳವಡಿ ರಾಣಿ ಮಲ್ಲಮ್ಮನ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಬೈಲಹೊಂಗಲ ತಾಲ್ಲೂಕು ಬೆಳವಡಿ ಗ್ರಾಮದ ‘ರಾಣಿ ಮಲ್ಲಮ್ಮ ಅಭಿಮಾನಿ ಬಳಗ’ದವರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ, ಮರಾಠಿ ಸೈನಿಕರೊಂದಿಗೆ ಯುದ್ಧ ಮಾಡಿ ಜಯ ಗಳಿಸಿದ ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರಶಂಸೆಗೆ ಪಾತ್ರವಾಗಿದ್ದ ವೀರ ರಾಣಿ ಮಲ್ಲಮ್ಮ. 16ನೇ ಶತಮಾನದಲ್ಲಿ 1800 ಮಂದಿಯ ಮಹಿಳಾ ಸೈನ್ಯವನ್ನು ಕಟ್ಟಿದ್ದರು. ಅವರ ಇತಿಹಾಸವನ್ನು ತಿಳಿಸುವುದಕ್ಕೋಸ್ಕರ ಸರ್ಕಾರವು ಫೆ. 28 ಹಾಗೂ ಮಾರ್ಚ್‌ 1ರಂದು ಬೆಳವಡಿಯಲ್ಲಿ ಮಲ್ಲಮ್ಮನ ಉತ್ಸವವನ್ನು ನಡೆಸುತ್ತಿದೆ. ಇದೆಲ್ಲವನ್ನೂ ಪರಿಗಣಿಸಿ, ಶೌರ್ಯದ ಪ್ರತೀಕವಾದ ಅವರ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿ, ಇಂದಿನ ಪೀಳಿಗೆಗೆ ಪ್ರೇರಣೆ ನೀಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಹಿರಿಯರಾದ ಡಾ.ಆರ್.ಬಿ. ಪಾಟೀಲ, ಸಿ.ಎಸ್. ಚಿಕ್ಕನಗೌಡರ, ಈರಣ್ಣ ಕರೀಕಟ್ಟಿ, ಪ್ರಕಾಶ ಹುಂಬಿ, ಬಸವರಾಜ ಬಳಿಗಾರ, ಗಿರಿಮಲ್ಲಯ್ಯಹೊಸಮಠ, ಶಂಕ್ರಪ್ಪ ಬೇವಿನಕೊಪ್ಪ, ಅರ್ಜುನ ಕೆಂಪಣ್ಣವರ, ನಿಂಗಪ್ಪ ತುರಾಯಿ, ಸಂಗಯ್ಯ ಹಿರೇಮಠ, ದುಂಡಪ್ಪ ಗೋದಳ್ಳಿ, ಶಂಕರ ಪರಮಾನಾಯಕ ಹಾಗೂ ಬೆಳವಡಿ ಮಲ್ಲಮ್ಮನ ಕುರಿತು ಕೃತಿ ರಚಿಸಿರುವ ಯ.ರು. ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು