ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 3 ಸಾವಿರದ ಗಡಿ ದಾಟಿದ ಡೆಂಗಿ

11 ದಿನಗಳಲ್ಲಿ 642 ಮಂದಿಗೆ ಜ್ವರ ದೃಢ * ಮಳೆಯಿಂದ ಪ್ರಕರಣಗಳ ಸಂಖ್ಯೆ ಹೆಚ್ಚಳ
Last Updated 12 ಜುಲೈ 2022, 16:03 IST
ಅಕ್ಷರ ಗಾತ್ರ

ಬೆಂಗಳೂರು: ಹವಾಮಾನದಲ್ಲಿ ವೈಪರೀತ್ಯ ಹಾಗೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಜ್ವರಕ್ಕೆ ಒಳಪಡುವವರ ಸಂಖ್ಯೆ ಹೆಚ್ಚಳವಾಗಿದೆ.11 ದಿನಗಳಲ್ಲಿ 642 ಮಂದಿ ಈ ಜ್ವರದಿಂದ ಬಳಲಿದ್ದಾರೆ. ಈವರೆಗೆ ಡೆಂಗಿ ಪೀಡಿತರಾದವರ ಒಟ್ಟು ಸಂಖ್ಯೆ 3 ಸಾವಿರದ ಗಡಿ (3,116) ದಾಟಿದೆ.

ಕಳೆದ ವರ್ಷ ಈ ವೇಳೆಗೆ ರಾಜ್ಯದಲ್ಲಿ ವರದಿಯಾದ ಡೆಂಗಿ ಪ್ರಕರಣಗಳ ಒಟ್ಟು ಸಂಖ್ಯೆ 1,500ರ ಗಡಿಯೊಳಗಿತ್ತು.ಈ ವರ್ಷ 57,459 ಡೆಂಗಿಶಂಕಿತರನ್ನು ಗುರುತಿಸಿ,ತಪಾಸಣೆಗೆ ಒಳಪಡಿಸಲಾಗಿದೆ. 24,277 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 23,106 ಮಂದಿಯಲ್ಲಿಡೆಂಗಿಶಂಕೆ ವ್ಯಕ್ತವಾಗಿದ್ದು, 585 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ.

ಈ ವರ್ಷಡೆಂಗಿಜ್ವರದಿಂದ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.2021ರಲ್ಲಿ 7,189 ಮಂದಿಡೆಂಗಿಪೀಡಿತರಾಗಿದ್ದರು. ಅವರಲ್ಲಿ ಐವರುಮೃತಪಟ್ಟಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.ಪ್ರಕರಣಗಳ ಸಂಖ್ಯೆ ಎಂಟು ಜಿಲ್ಲೆಗಳಲ್ಲಿ ಮೂರಂಕಿ, 21 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.ಉಡುಪಿಯಲ್ಲಿ 344, ಮೈಸೂರಿನಲ್ಲಿ 329,ದಕ್ಷಿಣ ಕನ್ನಡದಲ್ಲಿ 169,ಶಿವಮೊಗ್ಗದಲ್ಲಿ 150, ಚಿತ್ರದುರ್ಗದಲ್ಲಿ 148, ಹಾಸನದಲ್ಲಿ 117 ಹಾಗೂ ವಿಜಯಪುರದಲ್ಲಿ 106 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆ ಇವೆ.

700 ಮಂದಿಗೆ ಚಿಕೂನ್‌ಗುನ್ಯಾ:28 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.18 ಸಾವಿರಕ್ಕೂ ಅಧಿಕ ಮಂದಿಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 11 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ700 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

ವಿಜಯಪುರದಲ್ಲಿ 134, ಕೋಲಾರದಲ್ಲಿ 100, ಬೆಂಗಳೂರು ಗ್ರಾಮಾಂತರದಲ್ಲಿ 49, ಹಾಸನದಲ್ಲಿ 44, ತುಮಕೂರಿನಲ್ಲಿ 42 ಹಾಗೂ ಚಿತ್ರದುರ್ಗದಲ್ಲಿ 41 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 40ಕ್ಕಿಂತ ಕಡಿಮೆಯಿದೆ.

‘ಮುಂಗಾರು ಮಳೆಯ ಅವಧಿಯಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಲಿವೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆ, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಹಾಗಾಗಿ, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಡೆಂಗಿ ಜ್ವರಕ್ಕೆ ಈ ವರ್ಷ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ’ ಎಂದು ಹೆಸರು ಬಹಿರಂಗ‍ಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT