ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿಸಿ ಅಧ್ಯಕ್ಷರಾಗಿ ದೇವೇಂದ್ರ ದರ್ಡಾ

Last Updated 11 ಸೆಪ್ಟೆಂಬರ್ 2020, 18:47 IST
ಅಕ್ಷರ ಗಾತ್ರ

ಬೆಂಗಳೂರು: ಆಡಿಟ್‌ ಬ್ಯೂರೊ ಆಫ್‌ ಸರ್ಕ್ಯುಲೇಶನ್‌ (ಎಬಿಸಿ) ಸಂಸ್ಥೆಗೆ, 2020–21ನೇ ಸಾಲಿನ ಅಧ್ಯಕ್ಷರಾಗಿ ಲೋಕಮತ್ ಮಾಧ್ಯಮ ಸಮೂಹದ ಆಡಳಿತ ನಿರ್ದೇಶಕ ದೇವೇಂದ್ರ ದರ್ಡಾ ಅವರು ಆಯ್ಕೆಯಾಗಿದ್ದಾರೆ.

ದರ್ಡಾ ಅವರು ಈ ಹಿಂದೆ ಐಎನ್‌ಎಸ್‌ ಹಾಗೂ ಐಎಫ್‌ಆರ್‌ಎ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ವೆಸ್ಟರ್ನ್‌ ಇಂಡಿಯಾ ಫುಟ್‌ಬಾಲ್‌ ಅಸೋಸಿಯೇಶನ್‌ನ ಆಡಳಿತ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಅವರು, ಮಹಾರಾಷ್ಟ್ರದ ಹಲವು ಶೈಕ್ಷಣಿಕ ಸಂಸ್ಥೆಗಳ ಆಡಳಿತ ಮಂಡಳಿಗಳ ಸದಸ್ಯರಾಗಿದ್ದಾರೆ.

ಎಬಿಸಿಯ 2020-21ರ ಆಡಳಿತ ಮಂಡಳಿ ಸದಸ್ಯರ ವಿವರ ಇಂತಿದೆ:

ಪ್ರಕಾಶಕರ ಪ್ರತಿನಿಧಿಗಳು: ದೇವೇಂದ್ರ ವಿ. ದರ್ಡಾ, ರಿಯಾದ್‌ ಮ್ಯಾಥ್ಯು, ಕಾರ್ಯದರ್ಶಿ (ಮಲಯಾಳ ಮನೋರಮ), ಹೊರ್ಮುಸ್‌ಜಿ ಎನ್‌. ಕಾಮಾ (ಬಾಂಬೆ ಸಮಾಚಾರ), ಶೈಲೇಶ್‌ ಗುಪ್ತಾ (ಜಾಗರಣ್‌ ಪ್ರಕಾಶನ್), ಪ್ರತಾಪ್‌ ಜಿ. ಪವಾರ್‌ (ಸಕಾಳ್‌ ಪೇಪರ್ಸ್‌), ಪ್ರವೀಣ್‌ ಸೋಮೇಶ್ವರ್‌ (ಎಚ್‌ಟಿ ಮೀಡಿಯಾ ಲಿ.), ಮೋಹಿತ್‌ ಜೈನ್‌ (ಬೆನ್ನೆಟ್‌, ಕೋಲ್ಮನ್‌ ಆ್ಯಂಡ್‌ ಕಂ.ಲಿ.) ಹಾಗೂ ಧ್ರುಬ ಮುಖರ್ಜಿ (ಎಬಿಪಿ ಪ್ರೈ.ಲಿ.)

ಜಾಹೀರಾತುದಾರರ ಪ್ರತಿನಿಧಿಗಳು: ಕರುಣೇಶ್‌ ಬಜಾಜ್‌ (ಐಟಿಸಿ ಲಿ.) ದೇಬಬ್ರತ ಮುಖರ್ಜಿ (ಯುನೈಟೆಡ್‌ ಬ್ರೂಯರೀಸ್‌ ಲಿ.) ಹಾಗೂ ಅನಿರುದ್ಧ ಹಲ್ದಾರ್‌ (ಟಿವಿಎಸ್‌ ಮೋಟರ್ಸ್‌ ಕಂ.ಲಿ.)

ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳು: ವಿಕ್ರಂ ಸಖುಜಾ (ಮ್ಯಾಡಿಸನ್‌ ಕಮ್ಯುನಿಕೇಶನ್ಸ್‌ ಪ್ರೈ.ಲಿ.), ಶಶಿಧರ್‌ ಸಿನ್ಹಾ (ಮೀಡಿಯಾ ಬ್ರ್ಯಾಂಡ್ಸ್‌ ಪ್ರೈ.ಲಿ.), ಶ್ರೀನಿವಾಸನ್‌ ಕೆ. ಸ್ವಾಮಿ (ಆರ್‌ಕೆ ಸ್ವಾಮಿ ಬಿಬಿಡಿಒ ಪ್ರೈ.ಲಿ.) ಹಾಗೂ ಆಶಿಶ್‌ ಭಾಸಿನ್‌ (ಡೆಂಟ್ಸು ಏಜನ್ಸೀಸ್‌ ನೆಟ್‌ವರ್ಕ್‌ ಕಮ್ಯುನಿಕೇಶನ್ಸ್‌ ಇಂಡಿಯಾ ಲಿ.). ಹೊರ್ಮುಜ್ದ್‌ ಮಸಾನಿ – ಮಹಾ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT