ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಆಸೆಗೆ ತಣ್ಣೀರೆರಚುವ ಕೆಲಸವನ್ನು ಸಿದ್ದರಾಮಯ್ಯ ಬಣ ಮಾಡುತ್ತಿದೆ: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ವಿಚಾರದ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಹೋದ ಕಡೆಯಲ್ಲೆಲ್ಲಾ ಚಹಾ ಕುಡಿಸಿ ‘ಸಿದ್ದರಾಮಯ್ಯ ಮುಂದಿನ‌ ಮುಖ್ಯಮಂತ್ರಿ’ ಎಂದು ಜೈಕಾರ ಹಾಕಿಸುತ್ತಿದ್ದ ಸಿದ್ದರಾಮಯ್ಯ ಈಗ ಮತ್ತೊಂದು ತಂತ್ರ‌ ಪ್ರಯೋಗಿಸಿದ್ದಾರೆ‌. ಮುಂದಿನ ಸಿಎಂ ಎಂದು ಈಗಲೇ ಘೋಷಿಸುವಂತೆ ಸಿದ್ದರಾಮಯ್ಯ ಬಣ ಕೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ, ಹಾಗಾದರೆ ಡಿ.ಕೆ.ಶಿವಕುಮಾರ್‌ ಲೆಕ್ಕಕ್ಕಿಲ್ಲವೇ?’ ಎಂದು ಪ್ರಶ್ನಿಸಿದೆ.

‘ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲ. ಡಿಕೆಶಿ ಆಸೆಗೆ ಈಗಿಂದೀಗಲೇ ತಣ್ಣೀರೆರಚುವ ಕೆಲಸ ಸಿದ್ದರಾಮಯ್ಯ ಬಣದಿಂದ ನಡೆಯುತ್ತಿದೆ. ಲಾಟರಿ ಎತ್ತಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?’ ಎಂದು ಬಿಜೆಪಿ ಕೇಳಿದೆ.

‘ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್‌ ನಾಯಕರು ಡಿಕೆಶಿ ನಡೆಯನ್ನು ಟೀಕಿಸಿ ಎಂ.ಬಿ.ಪಾಟೀಲರ ಪರವಾಗಿ ನಿಂತುಕೊಂಡರು. ಈಗ ಅದೇ ಎಂ.ಬಿ.ಪಾಟೀಲರು ಸಿದ್ದರಾಮಯ್ಯ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಚಿಂತನ ಶಿಬಿರಕ್ಕೆ ಹೋಗುವ ಮುನ್ನ ಮೀರ್‌ ಸಾದಿಕ್ ರಣತಂತ್ರ ಹೆಣೆದಿದ್ದರೇ?’ ಎಂದು ಬಿಜೆಪಿ ಟ್ವೀಟಿಸಿದೆ.

‘ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದು ಡಿ.ಕೆ.ಶಿವಕುಮಾರ್‌ ಅವರು ಹೋರಾಟ, ಎತ್ತಿನಗಾಡಿ ಪ್ರಯಾಣ, ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಮಾಡಿದ್ದು. ಆದರೆ, ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಮುಂದಿನ ಸಿಎಂ ಎಂದು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದಾರೆ’ ಎಂದು ಬಿಜೆಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT