2021ರ ಶೈಕ್ಷಣಿಕ ಪರೀಕ್ಷೆಗಳ ಫಲಿತಾಂಶ ಪರಿಗಣಿಸಲು ಸುತ್ತೋಲೆ
ಬೆಂಗಳೂರು: ಅನುಕಂಪದ ಆಧಾರದ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿರುವ ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗಿ ಪ್ರಕಟವಾಗಿರುವ ಶೈಕ್ಷಣಿಕ ಪರೀಕ್ಷೆಗಳ ಫಲಿತಾಂಶಗಳನ್ನು ಪರಿಗಣಿಸುವಂತೆ ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
2019–20ನೇ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ, ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್ ಮತ್ತು ಇನ್ನಿತರ ತತ್ಸಮಾನ ಕೋರ್ಸ್ಗಳ ಫಲಿತಾಂಶ ಕೋವಿಡ್ನಿಂದ ವಿಳಂಬವಾಗಿತ್ತು. ಅದೇ ವರ್ಷ ಮೃತಪಟ್ಟಿದ್ದ. ಸರ್ಕಾರಿ ನೌಕರರ ಅವಲಂಬಿತರು ಅನುಕಂಪದ ಆಧಾರದಲ್ಲಿ ನೇಮಕಾತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸುವಾಗಿ ವಿಳಂಬವಾಗಿ ಪ್ರಕಟವಾಗಿದ್ದ ಪರೀಕ್ಷಾ ಫಲಿತಾಂಶಗಳನ್ನು ಪರಿಗಣಿಸುವಂತೆ 2021ರ ಸೆಪ್ಟೆಂಬರ್ 17ರಲ್ಲಿ ಆದೇಶ ಹೊರಡಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.