ಮಂಗಳವಾರ, ಸೆಪ್ಟೆಂಬರ್ 21, 2021
21 °C
ಒಬ್ಬರಿಗೆ ಕೊರೊನಾ ಸೋಂಕು, ಆದಿತ್ಯ ಆಳ್ವ ನಾಪತ್ತೆ

ಡ್ರಗ್ಸ್‌ ಜಾಲ| ವೈಭವ್ ಜೈನ್ ‌, ರಂಕಾ ವಶಕ್ಕೆ: ಒಬ್ಬರಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್‌ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ವೈಭವ್ ಜೈನ್ ಹಾಗೂ ಪ್ರಶಾಂತ್ ರಂಕಾ ಎಂಬುವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ವೈಭವ್ ಜೈನ್‌ಗೆ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ರಾಜಸ್ಥಾನದ ವೈಭವ್, ಡ್ರಗ್ಸ್‌ ಸರಬರಾಜಿನ ಉಪ ಪೆಡ್ಲರ್ ಎಂದು ಹೇಳಲಾಗುತ್ತಿದೆ. ಆತನನ್ನು ವಶಕ್ಕೆ ಪಡೆಯುತ್ತಿದ್ದಂತೆ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ಸೋಂಕು ತಗುಲಿದ್ದು ಗೊತ್ತಾಗುತ್ತಿದ್ದಂತೆ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೊಬ್ಬ ಆರೋಪಿ ಪ್ರಶಾಂತ್ ರಂಕಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಭಾಷೆ ಗೊತ್ತಿಲ್ಲವೆನ್ನುತ್ತಿರುವ ಆಫ್ರಿಕಾ ಪ್ರಜೆ: ಡ್ರಗ್ಸ್‌ ಪೂರೈಕೆ ಮಾಡಿದ್ದ ಆರೋಪದಡಿ ಬಂಧಿಸಲಾಗಿರುವ ಆಫ್ರಿಕಾ ಪ್ರಜೆ ಲೋಮ್ ಪೆಪ್ಪರ್, ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ.

ಯಾವುದೇ ಪ್ರಶ್ನೆ ಕೇಳಿದರೂ ತನಗೆ ಭಾಷೆ ಗೊತ್ತಿಲ್ಲವೆಂದು ಸನ್ನೆ ಮೂಲಕವೇ ಹೇಳುತ್ತಿದ್ದಾನೆ. ನಟಿ ರಾಗಿಣಿ ಅವರ ಸ್ನೇಹಿತ ರವಿಶಂಕರ್ ಜೊತೆ ಲೋಮ್ ಇಂಗ್ಲಿಷ್‌ನಲ್ಲೇ ಮಾತನಾಡುತ್ತಿದ್ದ. ಅದರ ದಾಖಲೆಗಳನ್ನು ತೋರಿಸಿದಾಗಲೇ ಲೋಮ್ ಬಾಯ್ಬಿಡುತ್ತಿಲ್ಲವೆಂದು ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು