ಗುರುವಾರ , ಜೂನ್ 17, 2021
21 °C

ಸಿ.ಡಿ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸಿ.ಡಿ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿರುವುದು ನಿಜ. ಏನು ಮಾಡುವುದು? ಸರ್ಕಾರ ನಡೆಸುವಾಗ ಇಂಥ ಘಟನೆಗಳು ಎದುರಾಗುತ್ತಿರುತ್ತವೆ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಇಲ್ಲಿ ತಿಳಿಸಿದರು. 

‘ನಾವು ಅಷ್ಟು ಪ್ರಬುದ್ಧರಾಗಿಲ್ಲ. ವ್ಯಕ್ತಿಯೊಬ್ಬರ ವೈಯಕ್ತಿಕ ಬದುಕನ್ನು ಇಷ್ಟು ದೊಡ್ಡದಾಗಿ ಮಾಡಬಾರದಿತ್ತು, ಇದೊಂದು ವೈಯಕ್ತಿಕ ಘಟನೆ ಎಂದು ಸುಮ್ಮನಾಗಿ ಬಿಡಬಹುದಿತ್ತು. ಆದರೆ, ತೇಜೋವಧೆ ಮಾಡಲಾಗಿದೆ’ ಎಂದು ಹೇಳಿದರು.

ಶಾಸಕ ರಮೇಶ ಜಾರಕಿಹೊಳಿ ಬಂಧನ ಸಾಧ್ಯತೆ ವಿಚಾರವಾಗಿ ಪ್ರತಿಕ್ರಿಯಿಸಿ, ‘ಒಬ್ಬ ಮನುಷ್ಯನನ್ನು ಏಕಾಏಕಿ ಬಂಧಿಸುವುದು ಕಷ್ಟ. ಯುವತಿ ಹೇಳಿಕೆಗಳಲ್ಲಿಯೇ ಹಲವು ಗೊಂದಲಗಳಿವೆ. ಹೀಗಾಗಿ, ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮುಂದಿನ ಹೆಜ್ಜೆ ಇಡಬೇಕು. ಆಕೆಯೇ ಮುಂದೆ ಬಂದು ದೃಢವಾಗಿ ಹೇಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು’‌ ಎಂದರು. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೆಸರು ಪದೇಪದೇ ಪ್ರಸ್ತಾಪವಾಗುತ್ತಿರುವ ಕುರಿತು, ‘ಆಡಿಯೊದಲ್ಲಿ ಆಕೆ ಶಿವಕುಮಾರ್‌ ಹೆಸರು ಪ್ರಸ್ತಾಪ ಮಾಡಿದ್ದಾಳೆ ಅಷ್ಟೆ. ಈ ಸಂಬಂಧ ಯಾವುದೇ ರೀತಿಯ ಸಾಕ್ಷ್ಯ ನೀಡಿಲ್ಲ. ಶಿವಕುಮಾರ್‌ ಈ ರೀತಿ ಮಾಡಲಾರರು ಎಂಬುದು ನನ್ನ ಭಾವನೆ’ ಎಂದು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು