ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಪ್ರಶ್ನಿಸಿದ ಸಿ.ಪಿ.ಯೋಗೇಶ್ವರಗೆ ದಂಡ

ವಂಚನೆ ಪ್ರಕರಣ ಪ್ರಶ್ನಿಸಿದ್ದ ಅರ್ಜಿಗಳ ವಜಾ
Last Updated 12 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಂಚನೆ ಪ್ರಕರಣಗಳ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ವಿಧಾನ ಪರಿಷತ್ತಿನ ಸದಸ್ಯ ಸಿ.ಪಿ. ಯೋಗೇಶ್ವರ ಮತ್ತು ಇತರರು ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಕ್ಕಾಗಿ ₹3 ಸಾವಿರ ದಂಡ ವಿಧಿಸಿ ಅರ್ಜಿ ವಿಲೇವಾರಿ ಮಾಡಿದೆ.

ಕಂಪನಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ನವದೆಹಲಿಯ ಗಂಭೀರ ವಂಚನೆಗಳ ತನಿಖಾ ತಂಡ ನಡೆಸುತ್ತಿರುವ ವಿಚಾರಣೆ ಪ್ರಶ್ನಿಸಿ, ಯೋಗೇಶ್ವರ, ಯೋಗೇಶ್ವರ ಪತ್ನಿ ಮಂಜು ಕುಮಾರಿ, ಅರುಣ್ ಚರಂತಿಮಠ, ಸುಜಾತಾ ಚರಂತಿಮಠ, ಸಿ.ಪಿ. ಗಂಗಾಧರೇಶ್ವರ, ಪಿ. ಮಹಾದೇವಯ್ಯ, ಎಚ್‌.ಆರ್. ರಮೇಶ್‌ ಮತ್ತು ಸಾಂಬಶಿವ ರಾವ್ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ವ್ಯವಹಾರ ನಡೆಸುವಾಗ ಕಂಪನಿ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ತಂದೆಯ ಹೆಸರು ಮತ್ತು ವಿಳಾಸಗಳನ್ನು ಮೂರು ವಿಭಿನ್ನ ರೀತಿಯಲ್ಲಿ ನಮೂದಿಸಿ ಸುಳ್ಳು ದಾಖಲೆ ಸಲ್ಲಿಸಲಾಗಿದೆ ಎಂಬುದು ಯೋಗೇಶ್ವರ ಮತ್ತು ಇತರರ ವಿರುದ್ಧ ಇರುವ ಆರೋಪ.

ತನಿಖೆಗೆ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾವಜಾಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT