ಸೋಮವಾರ, ಸೆಪ್ಟೆಂಬರ್ 28, 2020
24 °C
ವಿಜಯಪುರ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ವಿಜಯಸಾರಥಿ ವಿರುದ್ಧ ಇ.ಡಿ ತನಿಖೆ

ವಂಚನೆ: ₹12.11 ಕೋಟಿ ಆಸ್ತಿ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌ಗೆ ವಂಚಿಸಿದ್ದ ಆರೋಪದಲ್ಲಿ ವಿಜಯಪುರದ ಐಸಿಐಸಿಐ ಬ್ಯಾಂಕ್‌ ಕ್ಲಸ್ಟರ್ ವ್ಯವಸ್ಥಾಪಕ ವಿಜಯಸಾರಥಿ ವಿರುದ್ಧ ದೂರು ದಾಖಲಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ₹12.11 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.

ವಂಚನೆ ಆರೋಪದಲ್ಲಿ ನಾಲ್ಕು ಎಫ್‌ಐಆರ್ ದಾಖಲಿಸಿಕೊಂಡಿದ್ದ ವಿಜಯಪುರ ಪೊಲೀಸರು, ನಂತರ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ತನಿಖೆ ಪೂರ್ಣಗೊಳಿಸಿದ ಬೆಂಗಳೂರಿನ ಸಿಐಡಿ ಪೊಲೀಸರು, ವಿಜಯಪುರ ಸಿಜೆಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ವಿಜಯಸಾರಥಿ ಮತ್ತು ಬ್ಯಾಂಕ್‌ನ ಮತ್ತೊಬ್ಬ ನೌಕರ ಸಚಿನ್‌ ಅಣ್ಣಪ್ಪ ಪಾಟೀಲ ಸೇರಿಕೊಂಡು ರದ್ದಾದ ಚೆಕ್‌, ಬಳಕೆಯಾದ ಚೆಕ್‌ ಮರು ಬಳಕೆ ಮಾಡಿಕೊಂಡು ₹70.44 ಕೋಟಿ ವಂಚಿಸಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಪೊಲೀಸರು ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು