ಮಂಗಳವಾರ, ಮೇ 24, 2022
25 °C

ಎಲ್ಲರ ಪ್ರಗತಿಯೇ ಗುರಿ: ಅಮಿತ್‌ ಶಾ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶದ ಮೂಲೆ ಮೂಲೆಗೂ ಸಹಕಾರ ಆಂದೋಲನ ತಲುಪಿ ಸುವ ಜತೆಗೆ ಆಧುನಿಕತೆ ಸ್ಪರ್ಶ ನೀಡಲಾಗುವುದು. ಎಲ್ಲರನ್ನು ಆರ್ಥಿಕ ವಾಗಿ ಸಬಲರಾಗಿಸುವುದು ಮೋದಿ ಸರ್ಕಾರದ ಗುರಿ’ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಹೇಳಿದರು

ಶುಕ್ರವಾರ ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಹಿಡಿದು ನಬಾರ್ಡ್‌ವರೆಗೆ ಪೂರ್ಣ ವ್ಯವಸ್ಥೆಯನ್ನು ಕಂಪ್ಯೂಟರೀ ಕರಣ ಮಾಡಲಾಗುವುದು ಮತ್ತು ಎಲ್ಲದಕ್ಕೂ ಅನ್ವಯವಾಗುವಂತೆ ಏಕ ರೂಪದ ಬ್ಯಾಂಕಿಂಗ್ ಮಾದರಿಯ ಸಾಫ್ಟ್‌ವೇರ್‌ ರೂಪಿಸಲಾಗುತ್ತಿದೆ. ಇದರಿಂದ ಈವರೆಗೆ ನಡೆಯುತ್ತಿದ್ದ
ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲಾಗುವುದು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲಾಗುವುದು ಎಂದು ಹೇಳಿದರು.

‘ನಾನು ಸಹಕಾರ ಕ್ಷೇತ್ರದಲ್ಲಿ ಸಕ್ರಿಯ ನಾಗಿದ್ದೇನೆ. ಸಹಕಾರ ಕ್ಷೇತ್ರವನ್ನು ದೇಶದ ಮೂಲೆ ಮೂಲೆಯಲ್ಲಿ ಸಮೃದ್ಧಗೊಳಿಸುವಲ್ಲಿ ಹಲವು ಸವಾಲುಗಳಿರುವುದು ನಿಜ. ಆದರೆ, ಅದನ್ನು ನಿವಾರಿಸಿ ಮುನ್ನಡೆಯುವ ವಿಶ್ವಾಸವಿದೆ’ ಎಂದರು.

ದೇಶ ವ್ಯಾಪಿ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಣದ ದುರ್ಬಳಕೆಗೆ ಕಡಿವಾಣ ಹಾಕಲಾಗುವುದು. ಸಹಕಾರ ಸಂಘಗಳಲ್ಲಿ ನಡೆಯುವ ಚುನಾವಣೆ, ಸಿಬ್ಬಂದಿ ನೇಮಕಾತಿ ಮತ್ತು ಖರೀದಿ ಗಳಲ್ಲಿ ಪಾರದರ್ಶಕತೆ ತರಲಾಗುವುದು. ಖರೀದಿಗಳನ್ನು ಆನ್‌ಲೈನ್‌ ನೆರವು ಪಡೆಯಲಾಗುವುದು. ಈ ಮೂಲಕ ಭ್ರಷ್ಟಾಚಾರವನ್ನು ಶೂನ್ಯ ಮಟ್ಟಕ್ಕೆ ತರಲಾಗುವುದು ಎಂದು ಶಾ ಹೇಳಿದರು.

ಶಾ ಈಗಲೂ ಸಹಕಾರ ಸಂಘದ ಅಧ್ಯಕ್ಷ !

‘ಅಮಿತ್‌ ಶಾ ಅವರು ಈಗಲೂ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಬಾರಿ ಅವರ ವಿರುದ್ಧ ಯುವಕನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆದರೆ ಶಾ ಅವರೇ ಗೆದ್ದು ಅಧ್ಯಕ್ಷರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಸಹಕಾರ ಕ್ಷೇತ್ರ ಅವರಿಗೆ ಪ್ರಬಲ ಇಚ್ಛೆಯ ಕ್ಷೇತ್ರವಾಗಿದ್ದು, ಆ ಕಾರಣಕ್ಕೆ ಅವರು ಮೊದಲ ಸಹಕಾರ ಸಚಿವರಾದರು. ಈ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಶಾ ಅವರಿಂದ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಕ್ಷೀರ ಸಮೃದ್ಧಿ ಬ್ಯಾಂಕ್‌ ದೇಶಕ್ಕೆ ಮಾದರಿ’

‘ನಂದಿನಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್‌ ಸ್ಥಾಪಿಸುವ ಮೂಲಕ ಕರ್ನಾಟಕದ ದೇಶಕ್ಕೆ ಮಾದರಿಯಾಗಿದೆ.  ಪಶುಪಾಲಕರ ಆರ್ಥಿಕ ಸಬಲೀಕರಣಕ್ಕೆ ಮೀಸಲಾದ ಬ್ಯಾಂಕ್‌ ದೇಶದಲ್ಲಿ ಬೇರೆಲ್ಲೂ ಇಲ್ಲ’ ಎಂದು ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರಗತಿಪರ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಯ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಬಲಪಡಿಸುವ ಕೆಲಸ ಮಾಡಿದೆ. ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ನೀಡುವ ಮೂಲಕ ರೈತರನ್ನು ಆತ್ಮನಿರ್ಭರರನ್ನಾಗಿ ಮಾಡಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ರೀತಿ ನೆರವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು