ಬುಧವಾರ, ಮೇ 18, 2022
24 °C

ರಾಜ್ಯದಲ್ಲಿ‌ ಕೋಮುಗಲಭೆಗೆ ಸರ್ಕಾರದ‌ ಕುಮ್ಮಕ್ಕು: ಎಎಪಿ ನಾಯಕ ಭಾಸ್ಕರ್ ರಾವ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳು ಶೂನ್ಯವಾಗಿದ್ದು, ಇದನ್ನು‌ ಮರೆಮಾಚಿ ಜನರ ಗಮನ ಬೇರೆ ಕಡೆ ಸೆಳೆಯಲು ರಾಜ್ಯ ಸರ್ಕಾರವೇ ಕೋಮುಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಆಮ್ ಆದ್ಮಿ‌ ಪಕ್ಷದ ಮುಖಂಡ ಭಾಸ್ಕರ್ ರಾವ್ ಆರೋಪಿಸಿದರು. 


ಹುಬ್ಬಳ್ಳಿಯಲ್ಲಿ ಭಾನುವಾರ ಎಎಪಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದ ಸೈಕಲ್ ಯಾತ್ರೆಗೆ ಭಾಸ್ಕರ್‌ ರಾವ್‌ ಚಾಲನೆ‌ ನೀಡಿ‌ದರು.

ನಗರದಲ್ಲಿ‌ ಭಾನುವಾರ  ಪಕ್ಷದಿಂದ‌ ಹಮ್ಮಿಕೊಂಡಿದ್ದ ಸೌಹಾರ್ದ ಸೈಕಲ್ ಯಾತ್ರೆಗೆ ಚಾಲನೆ‌ ನೀಡಿ‌ ಮಾತನಾಡಿದ ಅವರು,  ಹತ್ತು ದಿನಗಳಲ್ಲಿ‌ ಉತ್ತರ ಕರ್ನಾಟಕದದಲ್ಲಿ ಮೂರು ಅಹಿತಕರ ಘಟನೆಗಳು‌ ನಡೆದಿವೆ. ಧಾರವಾಡದ‌ ನುಗ್ಗಿಕೆರೆಯ ಘಟನೆ,  ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಹಾಗೂ ಶನಿವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗಳು ಸರ್ಕಾರದ‌ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಜನರ ಮನಸ್ಸಿನಲ್ಲಿ ಹಿಂದೂ‌-ಮುಸ್ಲಿಂ ಎಂಬ ಭಾವನೆಗಳನ್ನು‌ ಕೆರಳಿಸುವ‌ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ ಎಂದು‌ ಆರೋಪಿಸಿದರು. 

ಪಿಎಸ್ ಐಗಳ ನೇಮಕಾತಿಯಲ್ಲಿ‌ ವ್ಯಾಪಕ‌ ಭ್ರಷ್ಟಾಚಾರ ನಡೆದಿದೆ. ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಿದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಬಂದಿದೆ. ನೇಮಕಾತಿ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಮಿಷನರ್‌ ಮಾತು ಸುಳ್ಳು ಎಂಬುದು ಸರ್ಕಾರಕ್ಕೆ, ಸಿಎಂಗೆ ಆದ ಅಪಮಾನ: ಭಾಸ್ಕರ್ ರಾವ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು