ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕ ಅಭಿಜಾತ ಸಾಹಿತ್ಯದ ಇಂದ್ರಚಾಪ’

ಡಾ.ಹಂಪ ನಾಗರಾಜಯ್ಯ ಅವರ ಇಂಗ್ಲಿಷ್‌ ಕೃತಿ ಬಿಡುಗಡೆ
Last Updated 10 ಜೂನ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಇಂಗ್ಲಿಷ್‌ನಲ್ಲಿ ರಚಿಸಿದ ‘ದಿ ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ’(ಕರ್ನಾಟಕದ ಅಭಿಜಾತ ಸಾಹಿತ್ಯದ ಇಂದ್ರಚಾಪ) ಎಂಬ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ಲಂಡನ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆಯಿತು.

‘ಆದಿಕವಿ ಪಂಪಪೂರ್ವ ಯುಗದ ಸಾಹಿತ್ಯ’ ಸಂಪುಟವನ್ನು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರೊ. ನಳಿನಿ ಬಲ್ಬ್ ಹಾಗೂ ‘ಪಂಪೋತ್ತರ ಸಾಹಿತ್ಯದ ಒಂದನೆಯ ಭಾಗ’ ಸಂಪುಟವನ್ನು ಅಮೆರಿಕದ ಡೆನಿಸನ್ ವಿಶ್ವವಿದ್ಯಾಲಯದ ಪ್ರೊ. ಜಾನ್ ಕಾರ್ಟ್, ಎರಡನೇ ಭಾಗದ ಸಂಪುಟವನ್ನು ಬೆಲ್ಜಿಯಂ ದೇಶದ ಗೆಂಟ್ ವಿಶ್ವವಿದ್ಯಾಲಯದ ಪ್ರೊ.ಟಿಲ್ಲೊ ಗೆಟಿಗ್ ಅವರು ಬಿಡುಗಡೆ ಮಾಡಿದರು. ಸಂಸ್ಕೃತ, ಪ್ರಾಕೃತ, ಮತ್ತು ಅಪಭ್ರಂಶ ಭಾಷೆಯ ಸಾಹಿತ್ಯ ಕುರಿತ 4ನೇ ಸಂಪುಟವನ್ನು ಡಾ. ನಿಕ್ ಬರ್ನಾರ್ಡ್ ಮತ್ತು ಶಾಸನಗಳನ್ನು ಕುರಿತ ಐದನೇ ಸಂಪುಟವನ್ನು ಪ್ರೊ. ಪೀಟರ್ ಫ್ಲೂಗೆಲರೂ ಅವರು ಬಿಡುಗಡೆ ಮಾಡಿದರು.

1,400 ಪುಟಗಳ ಈ ಗ್ರಂಥ ಕರ್ನಾಟಕದ ಅಭಿಜಾತ ಸಾಹಿತ್ಯದ ಸ್ವರೂಪ ಹಾಗೂ ಮಹತ್ವವನ್ನು ಪರಿಚಯಿಸುತ್ತಿದೆ. ಇದೇ ಸಂದರ್ಭದಲ್ಲಿ ಹಂಪನಾ ಅವರನ್ನು ಗೌರವಿಸಲಾಯಿತು. ಹಂಪನಾ ಅವರುಕನ್ನಡ, ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ರಚಿಸಿರುವ ಬೃಹತ್ ಸಂಪುಟವನ್ನು ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ. 5 ಸಂಪುಟಗಳ ಈ ಪುಸ್ತಕದಲ್ಲಿ ಕನ್ನಡ ಸಾಹಿತ್ಯದ ಆರಂಭದಿಂದ ಹದಿಮೂರನೇ ಶತಮಾನದ ವರೆಗಿನ ಪ್ರಮುಖ ಕವಿ-ಕಾವ್ಯ ಪರಿಚಯ ವಿಮರ್ಶೆ ಇದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT