ಭಾನುವಾರ, ಜೂನ್ 26, 2022
25 °C

ಸಾಮ್ರಾಟರ ಬೆತ್ತಲೆ ಸತ್ಯ ಬಿಚ್ಚಿಟ್ಟ ಮುನಿರಾಜು: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ‘ಅಶೋಕ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣವಾದ ‘ಬೆತ್ತಲೆ ಸತ್ಯ’ದ ಹುತ್ತ ಬಿಚ್ಚಿಕೊಂಡಿದ್ದು, ಇದಕ್ಕೇನು ಹೇಳುತ್ತೀರಿ ಸಾಮ್ರಾಟರೇ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ ಅವರು ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು.

ಅಂಥ ಕೃತ್ಯಗಳಿಂದಲೇ ಇಂದು ಬಿಜೆಪಿ ಗೆದ್ದು ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಎಂದು ಮುನಿರಾಜು ತಮ್ಮ ಪಂಚೇಂದ್ರಿಯಗಳ ಸಾಕ್ಷಿಯಾಗಿ ತುಂಬಿದ ಕಾರ್ಯಕರ್ತರ ಸಭೆಯಲ್ಲೇ ಹೇಳಿದ್ದಾರೆ’ ಎಂದಿದ್ದಾರೆ.

‘ರಾಜ್ಯದ ಮೇಲೆ ರಾಜ್ಯ ಗೆಲ್ಲುತ್ತಿರುವ ಬಿಜೆಪಿ ಗೆಲುವಿನ ಗುಟ್ಟು ಈಗ ರಟ್ಟು. ಅಡ್ಡದಾರಿಯ ಕೊಚ್ಚೆಯಲ್ಲಿ ಅರಳುವ ಕಮಲವನ್ನು ಮುಡಿದುಕೊಂಡು ಬೀಗುವವರ ‘ಕಳ್ಳವೋಟಿನ ಕಥೆ’ ನಿಮ್ಮ ಮಾಜಿ ಶಾಸಕರೇ ಬಯಲು ಮಾಡಿದ್ದಾರೆ’ ಎಂದವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು