ಬೆಂಗಳೂರು:‘ಸಿ.ಪಿ. ಯೋಗೇಶ್ವರ್ ಯು.ಬಿ. ಸಿಟಿ ಪಕ್ಕದಲ್ಲೇ ಇದ್ದರಲ್ಲಾ, ಆಗ ಏನು ಮಜಾ ಮಾಡುತ್ತಿದ್ದರಾ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೋಟೆಲ್ನಲ್ಲಿ ರಾಸಲೀಲೆ ನಡೆಸುತ್ತಿದ್ದರು’ ಎಂಬ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಸಿ.ಪಿ. ಯೋಗೇಶ್ವರ್ ಆರೋಪಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನನ್ನ ಜೀವನ ತೆರೆದ ಪುಸ್ತಕ. ನನಗೆ ಯಾರ ಪ್ರಮಾಣಪತ್ರವೂ ಬೇಡ’ ಎಂದರು.

‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ರಾಸಲೀಲೆ ನಡೆಸಲು ವೆಸ್ಟೆಂಡ್ ಹೋಟೆಲ್ಗೆ ಹೋಗುತ್ತಿರಲಿಲ್ಲ. ಸರ್ಕಾರಿ ಬಂಗಲೆ ಇಲ್ಲದ ಕಾರಣದಿಂದ ಸ್ವಲ್ಪ ಸಮಯ ವಿಶ್ರಾಂತಿಗಾಗಿ ಅಲ್ಲಿಗೆ ಹೋಗುತ್ತಿದ್ದೆ. ನಾನು ಎಲ್ಲೇ ಹೋದರೂ ಆಪ್ತ ಸಹಾಯಕ ನನ್ನ ಜತೆಯಲ್ಲೇ ಇರುತ್ತಿದ್ದರು. ಈಗಲೂ ಜತೆಯಲ್ಲೇ ಇರುತ್ತಾರೆ. ಆಗ ನನ್ನ ಸಂಪುಟ ಸಹೋದ್ಯೋಗಿಯಾಗಿದ್ದ ಸಾ.ರಾ. ಮಹೇಶ್ ಕೂಡ ಜತೆಯಲ್ಲೇ ಇರುತ್ತಿದ್ದರು. ಇನ್ನೂ ಅನೇಕ ಸ್ನೇಹಿತರು ನನ್ನೊಂದಿಗೆ ಇರುತ್ತಿದ್ದರು’ ಎಂದು ಹೇಳಿದರು.

‘ಈ ವ್ಯಕ್ತಿಯನ್ನು ನೋಡಿ ನಾನು ಕಲಿಯಬೇಕಾ? ಇವರೇನು ಗುಡಿಸಲಿನಲ್ಲಿ ಇದ್ದರಾ? ನನ್ನ ಜೀವನದಲ್ಲಿ ಕದ್ದುಮುಚ್ಚಿ ಯಾವ ಸಂಗತಿಗಳೂ ಇಲ್ಲ. ನನ್ನ ಬಗ್ಗೆ ಟೀಕಿಸುವಾಗ ಆತ ಬಳಸಿರುವ ಪದಪುಂಜಗಳೇ ಅವರ ಸಂಸ್ಕಾರವನ್ನು ಹೇಳುತ್ತವೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಮುಗಿದ ಅಧ್ಯಾಯ: ‘ಈ ವ್ಯಕ್ತಿಯದ್ದು ಚನ್ನಪಟ್ಟಣದಲ್ಲಿ ಮುಗಿದ ಅಧ್ಯಾಯ. ಅಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜಕ್ಕೂ ಅಲ್ಲಿಗೆ ಬಂದು ನೋಡಲಿ. ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹ 30 ಕೋಟಿ ಅಂದಾಜುಪಟ್ಟಿ ಸಿದ್ಧಪಡಿಸಿ, ಒಬ್ಬ ಗುತ್ತಿಗೆದಾರನ ಕೈಯಲ್ಲಿ ಗುಂಡಿ ಹೊಡೆಸಿದ್ದರು. ಅಲ್ಲಿಯೇ ತಗಡು ಹೊಡೆಸಿ, ಹಣ ಲೂಟಿಗೆ ಯೋಜನೆ ರೂಪಿಸಿಕೊಂಡಿದ್ದರು. ದುಡ್ಡು ಹೊಡೆಯೋಕೆ ನಾನು ಸಹಕಾರ ಕೊಡಬೇಕಿತ್ತಾ‘ ಎಂದು ಪ್ರಶ್ನಿಸಿದರು.

‘ಚನ್ನಪಟ್ಟಣದ ಅಂಬೇಡ್ಕರ್ ಭವನದ ಕತೆಯೂ ಎಲ್ಲರಿಗೆ ಗೊತ್ತಿದೆ. ಅಲ್ಲಿ ಗುಂಡಿ ಬಿದ್ದು, ನೀರು ನಿಂತಿದೆ. ನಾನು ಸ್ವಚ್ಛ ಮಾಡಿಸುತ್ತಿದ್ದೇನೆ. ನಾನು ಕಣ್ಣೀರು ಹಾಕಿಕೊಂಡು ಹೋಗಿಲ್ಲ. ಚನ್ನಪಟ್ಟಣಕ್ಕೆ ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಜನರಿಗೆ ನನ್ನ ಕೈಲಾದ ಸೇವೆ ಮಾಡಿದ್ದೇನೆ. ಈ ವ್ಯಕ್ತಿಯಿಂದ ನನಗೆ ಪ್ರಮಾಣಪತ್ರ ಬೇಕಿಲ್ಲ’ ಎಂದರು.

‘ಮೆಗಾಸಿಟಿ ಯೋಜನೆ ಹೆಸರಿನಲ್ಲಿ ಸಾವಿರಾರು ಜನರನ್ನು ಬೀದಿಪಾಲು ಮಾಡಿದ ಈ ವ್ಯಕ್ತಿ, ಸಿನಿಮಾ ತೆಗೆದು ಎಲ್ಲರನ್ನೂ ಹಾಳು ಮಾಡಿದ್ದು ಗೊತ್ತಿದೆ. ‘ಸೈನಿಕ’ ಎಂಬ ಸಿನಿಮಾ ಮಾಡಲು ಹೋಗಿದ್ದರು. ಹಣ ಕೊಟ್ಟವರು ಈಗಲೂ ಬೀದಿ ಪಾಲಾಗಿದ್ದಾರೆ. ನನ್ನ ವಿರುದ್ಧ ದಲಿತರ ಜಮೀನು ಹೊಡೆದ ಆರೋಪ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲೇ ಬಹಿರಂಗ ಚರ್ಚೆಗೆ ನಾನು ಸಿದ್ಧ. ಬಂದು ತೋರಿಸಲಿ’ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

‘ಚನ್ನಪಟ್ಟಣದ ಜತೆಗೆ ನಮ್ಮ ಸಂಬಂಧ ಬಹಳ ಹಳೆಯದು. ಈ ವ್ಯಕ್ತಿ ಚಡ್ಡಿ ಹಾಕಿದ್ದನೋ ಇಲ್ಲವೋ ಗೊತ್ತಿಲ್ಲ. ಆಗಲೇ ದೇವೇಗೌಡರ ಕುಟುಂಬಕ್ಕೆ ಚನ್ನಪಟ್ಟಣ ಜತೆ ಬಾಂಧವ್ಯ ಇತ್ತು. ಮುಕ್ತ ಚರ್ಚೆಗೆ ಬರಲಿ. ಉತ್ತರ ನೀಡುತ್ತೇನೆ’ ಎಂದರು.

ವೆಸ್ಟೆಂಡ್ ಹೋಟೆಲ್ನಲ್ಲಿ ಕುಮಾರಸ್ವಾಮಿ ರಾಸಲೀಲೆ: ಯೋಗೇಶ್ವರ್ ವಾಗ್ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.