ಬುಧವಾರ, ಜೂನ್ 16, 2021
28 °C

ಕೋರ್ಟ್‌ ಕಲಾಪ: ಸ್ವಯಂ ಪ್ರೇರಿತ ಅರ್ಜಿ ಮರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಮತ್ತು ಲಾಕ್‌ಡೌನ್ ಗಮನದಲ್ಲಿಟ್ಟುಕೊಂಡು ನ್ಯಾಯಾಲಯಗಳ ಕಾರ್ಯ ವೈಖರಿ ಕುರಿತು ನಿರ್ದೇಶನಗಳನ್ನು ನೀಡುವ ಸಂಬಂಧ ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯನ್ನು ಮರುದಾಖಲು ಮಾಡಿಕೊಂಡಿದೆ.

ಕಳೆದ ಲಾಕ್‌ಡೌನ್ ಅವಧಿಯಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ನ್ಯಾಯಾಲಯಗಳ ಕಾರ್ಯ–ಕಲಾಪಗಳು ಹೇಗಿರಬೇಕು ಎಂದು 2021 ಜನವರಿ 15ರ ಆದೇಶದ ನೀಡಲಾಗಿತ್ತು. ಬಳಿಕ ಆ ಅರ್ಜಿಯನ್ನು ವಿಲೇವಾರಿ ಮಾಡಲಾಗಿತ್ತು.

ಈಗ ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡಿರುವ ಮತ್ತು ಲಾಕ್‌ಡೌನ್ ಇರುವ ಕಾರಣ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.  

‘ವಕೀಲರು ಸಲ್ಲಿಸುವ ಅರ್ಜಿಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ವಕೀಲರು ಹೈಕೋರ್ಟ್‌ ಪ್ರವೇಶಿಸಲು ಅವಕಾಶ ಇಲ್ಲ. ಹೀಗಾಗಿ, ಆಕ್ಷೇಪಣೆಗೆ ಪ್ರತಿಕ್ರಿಯೆ ಸಲ್ಲಿಸಿ ಸರಿಪಡಿಸುವ ಅವಧಿಯನ್ನು ಜೂನ್ 25ರ ತನಕ ವಿಸ್ತರಿಸಲಾಗಿದೆ. ಇದು ಕಲಬುರ್ಗಿ ಮತ್ತು ಧಾರವಾಡ ಪೀಠಕ್ಕೂ ಅನ್ವಯವಾಗುತ್ತದೆ. ಕ್ರಿಮಿನಲ್ ವಿಷಯಗಳಲ್ಲಿ ಶುಲ್ಕ ಮತ್ತು ನಿರ್ವಹಣೆ ಹೊರತುಪಡಿಸಿ ಬೇರೆ ಆಕ್ಷೇಪಣೆಗಳನ್ನು ಎತ್ತಬಾರದು’ ಎಂದು ಪೀಠ ತಿಳಿಸಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು