ಸೋಮವಾರ, ಜುಲೈ 4, 2022
22 °C

ಜಾತ್ಯತೀತ ಪಾಠ ಮಾಡುವ ಅಗತ್ಯ ಇಲ್ಲ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಸಂವಿಧಾನದಲ್ಲಿ ‘ಜಾತ್ಯತೀತ’ ಪದ ಇರಬೇಕೊ– ಬೇಡವೊ ಎನ್ನುವುದರ ಬಗ್ಗೆ ಚರ್ಚೆ ಅಗತ್ಯ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ‘ಜಾತ್ಯತೀತ’ ಪದ ಬಳಸಿರಲಿಲ್ಲ. ಕಾಂಗ್ರೆಸ್‌ ನೇತೃತ್ವದ ಸರ್ಕಾರ ‘ಜಾತ್ಯತೀತ’ ಪದ ಸೇರಿಸಿತ್ತು. ಬಹುಸಂಖ್ಯಾತ ಹಿಂದೂಗಳಿಗೆ ಮೋಸ ಮಾಡಲು ಕಾಂಗ್ರೆಸ್‌ನವರು ಉದಾರತೆ, ಜಾತ್ಯತೀತತೆ ಪಾಠ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವನೊಬ್ಬ ನಾಮ ಹಲವು ಎನ್ನುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇಲ್ಲ. ಕೃಷ್ಣ, ರಾಮ ಹುಟ್ಟಿದ ನಾಡಿನಲ್ಲಿ ಅಲ್ಲಾ ಒಬ್ಬನೇ ದೇವರು ಅಂತ ಕೂಗುತ್ತಾರೆ. ಹಿಂದೂಗಳ ಅಂಗಡಿಗಳಲ್ಲಿ ಮುಸ್ಲಿಮರು ಮಾಂಸ ಖರೀದಿಸುತ್ತಾರಾ? ಕ್ರಿಯೆಗೆ ತಕ್ಕೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಹೇಳಿದರು.

ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ಅಮಾನವೀಯ: ಎಚ್‌.ವಿಶ್ವನಾಥ್‌
ಮೈಸೂರು:
‘ಜಾತ್ರೆ ಮತ್ತು ಧಾರ್ಮಿಕ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ವಹಿವಾಟು ನಡೆಸದಂತೆ ನಿರ್ಬಂಧ ಹೇರುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದು ಅಮಾನವೀಯ ನಡೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಖಂಡಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ವ್ಯಾಪಾರ ಅವರ ವೃತ್ತಿ. ಒಂದು ಸಮುದಾಯದ ವೃತ್ತಿಗೆ ಬಹಿಷ್ಕಾರ ಹಾಕುವುದು ಸರಿಯಲ್ಲ. ಅವರು ಹೊಟ್ಟೆಗೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಮುಸ್ಲಿಮರು ಬೇರೆಯಲ್ಲ, ಅವರು ಭಾರತೀಯರು’ ಎಂದರು.

‘ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ನಡೆಯಬೇಕು. ಸರ್ಕಾರ ಅವರಿಗೆ ರಕ್ಷಣೆ ಒದಗಿಸಲಿ. ಎಲ್ಲ ಜಾತಿ, ಜನಾಂಗ, ಧರ್ಮ ಮತ್ತು ಭಾಷಿಕರಿಗೂ ಇಲ್ಲಿ ಜೀವಿಸಲು, ವೃತ್ತಿ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಸಂವಿಧಾನವನ್ನು ಮೀರಿ ಹೋಗುವುದನ್ನು ಒಪ್ಪಲಾಗದು. ಅಂತಹ ಪ್ರಯತ್ನ ಯಾರೂ ಮಾಡಬಾರದು ಎಂಬುದೇ ನನ್ನ ವಿನಂತಿ’ ಎಂದು ಹೇಳಿದರು.

ಇಸ್ಲಾಂನಲ್ಲಿ ಜಾತ್ಯತೀತಕ್ಕೆ ಅವಕಾಶ ಇದಿಯಾ? ಹಿಂದೂಗಳು ದೇಗುಲಗಳಲ್ಲಿ ಈಶ್ವರ, ಅಲ್ಲಾ ತೇರೆ ನಾಮ್ ಎಂದು ಭಜಿಸುತ್ತಾರೆ. ಆದರೆ ಮಸೀದಿಯಲ್ಲಿ ಮೌಲ್ವಿ, ಮುತವಲ್ಲಿ, ಧರ್ಮಗುರು ಅದನ್ನು ಹೇಳುತ್ತಾರಾ? ಮೊದಲು ಮುಸ್ಲಿಮರು ಜಾತ್ಯತೀತರಾಗಬೇಕು. ನಂತರ ಬೇರೆಯವರಿಗೆ ಉಪದೇಶ ಮಾಡಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು