ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡಕ್ಕೆ ಗಣಿಗಾರಿಕೆ ಭೀತಿ: ವನ್ಯಜೀವಿಧಾಮದ ಸುತ್ತ ಅನುಮತಿಗೆ ಪ್ರಸ್ತಾವನೆ

ಪರಿಸರ ಸೂಕ್ಷ್ಮವಲಯ 1 ಕಿ.ಮೀ.ಗೆ ನಿಗದಿ
Last Updated 28 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮದ ‘ಪರಿಸರ ಸೂಕ್ಷ್ಮವಲಯ’ದ 10 ಕಿ.ಮೀ ವ್ಯಾಪ್ತಿಯ ಒಳಗೆ ಗಣಿಗಾರಿಕೆಗೆ ಅನುಮತಿ ಕೋರಿ ರಾಜ್ಯ ವನ್ಯಜೀವಿ ಮಂಡಳಿಗೆ 24 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇದರ ಬೆನ್ನಲ್ಲೆ, ಈ ವನ್ಯಜೀವಿಧಾಮದ ಪರಿಸರ ಸೂಕ್ಷ್ಮವಲಯವನ್ನು ರಾಜ್ಯ ಸರ್ಕಾರ 1 ಕಿಲೊಮೀಟರ್‌ಗೆ ನಿಗದಿಪಡಿಸಿದೆ.

ಆ ಮೂಲಕ, ‘ಉತ್ತರ ಕರ್ನಾಟಕದ ಸಹ್ಯಾದ್ರಿ’ ಎನಿಸಿರುವ ಕಪ್ಪತಗುಡ್ಡದ ಸೆರಗಿನಲ್ಲಿ ಗಣಿಗಾರಿಕೆ ಮತ್ತಷ್ಟು ವ್ಯಾಪಕ ಗೊಳ್ಳುವುದು ಖಚಿತವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಡಳಿಯ ಸಭೆ ಸೆ. 5ರಂದು ನಡೆಯ ಲಿದೆ. ಈ ಸಭೆಯಲ್ಲಿ ಚರ್ಚಿಸಲು ಸಿದ್ಧಪಡಿಸಿದ ಕಾರ್ಯಸೂಚಿಯಲ್ಲಿ ಈ ಪ್ರಸ್ತಾವನೆ ಗಳಿವೆ. ಪ್ರಸ್ತಾಪಿತ ಪರಿಸರ ಸೂಕ್ಷ್ಮವಲಯದ ಗಡಿಯಿಂದ ಈ ಯೋಜನಾ ಪ್ರಸ್ತಾವನೆಗಳು ಹೊರಗಡೆ ಬರುತ್ತವೆ ಎಂದು ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಕಪ್ಪತಗುಡ್ಡ ವನ್ಯಜೀವಿಧಾಮ, ಗುಡೆಕೋಟೆ ಕರಡಿಧಾಮ ಸೇರಿದಂತೆ ನಾಲ್ಕು ವನ್ಯಜೀವಿ ಧಾಮಗಳ ಪರಿಸರ ಸೂಕ್ಷ್ಮವಲಯವನ್ನು 1 ಕಿ.ಮೀಗೆ ನಿಗದಿಪಡಿಸಿ ಇದೇ 25ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಕಪ್ಪತಗುಡ್ಡ ವನ್ಯಜೀವಿಧಾಮ ವ್ಯಾಪ್ತಿಯ ಪ್ರಸ್ತಾವನೆಗಳನ್ನುರಾಜ್ಯ ವನ್ಯಜೀವಿ ಮಂಡಳಿಗೆ ಶಿಫಾರಸು ಮಾಡಿರುವ ಗದಗ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ (ಡಿಎಫ್‌ಒ) ದೀಪಿಕಾ ಬಾಜಪೇಯಿ, ‘ಈ ಪ್ರಸ್ತಾವನೆಗಳು ವನ್ಯಜೀವಿ ಧಾಮದ ಗಡಿಯಿಂದ 10 ಕಿ.ಮೀ ಒಳಗಿದ್ದರೂ ವನ್ಯಜೀವಿಧಾಮದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಪ್ರಸ್ತಾಪಿತ ಗಣಿಗಾರಿಕಾ ಪ್ರದೇಶದ ಸುತ್ತಲೂ ಈಗಾಗಲೇ ಹಲವಾರು ಕ್ವಾರಿಗಳಿರುವುದರಿಂದ ಈ ಪ್ರಸ್ತಾವನೆ ಗಳಿಗೂ ಅನುಮತಿ ನೀಡಬಹುದು’ ಎಂದಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಕಪ್ಪತ ಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮವಲಯವನ್ನು ನಿಗದಿಪಡಿಸಿದ ನಂತರ ಅದನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಿದೆ. ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿ ಸಲಿದೆ. ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ 1 ಕಿ.ಮೀ ಹೊರಗೆ ಗಣಿಗಾರಿಕೆ ಸೇರಿದಂತೆ ಯಾವುದೇ ಅಭಿವೃದ್ಧಿ ಚಟುವಟಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಅಲ್ಲಿಯವರೆಗೆ ರಾಜ್ಯ ವನ್ಯಜೀವಿ ಮಂಡಳಿಯ ಅನುಮೋ ದನೆಯ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಅನು ಮೋದನೆ ಪಡೆಯಬೇಕು’ ಎಂದರು.

2019ರ ಮೇ 16ರಂದು ಕಪ್ಪತಗುಡ್ಡದ 60,332 ಎಕರೆ ಪ್ರದೇಶವನ್ನು ‘ವನ್ಯಜೀವಿಧಾಮ’ವೆಂದು ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೀಗ ಈ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಶಿರಹಟ್ಟಿ ತಾಲ್ಲೂಕಿನಲ್ಲಿ ಗಣಿಗಾರಿಕೆಗೆ ಅತೀ ಹೆಚ್ಚು 19 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಅದರಲ್ಲೂ ಈ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದಲ್ಲಿ ಗಣಿಗಾರಿಕೆಗೆ 17 ಪ್ರಸ್ತಾವನೆಗಳಿವೆ. ಉಳಿದಂತೆ, ಲಕ್ಷ್ಮೀಶ್ವರ ತಾಲ್ಲೂಕಿನಲ್ಲಿ ಮೂರು, ಮುಂಡರಗಿ, ಗದಗ ತಾಲ್ಲೂಕುಗಳಿಂದ ತಲಾ ಒಂದೊಂದು ಪ್ರಸ್ತಾವನೆ ಸಲ್ಲಿಕೆ ಆಗಿವೆ.

ಕರಡಿಧಾಮ ವ್ಯಾಪ್ತಿಯಲ್ಲೂಗಣಿಗಾರಿಕೆ: ಬಳ್ಳಾರಿ ಜಿಲ್ಲೆಯ ಗುಡೆಕೋಟೆ ಕರಡಿಧಾಮವನ್ನು ವಿಸ್ತರಿಸಿ 2019ರ ಮೇ 16ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ವಿಸ್ತರಣಾ ಕರಡಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ, ಮೊಳಕಾಲ್ಮೂರು ತಾಲ್ಲೂಕಿನ ಹೇರೂರು ಗ್ರಾಮದಲ್ಲಿ 12.10 ಎಕರೆ ಪ್ರದೇಶದಲ್ಲಿ ಖಾಜಾ ಹುಸೇನ್‌ ಎಂಬವರು ಹಾಗೂ ನಾಗಸಮುದ್ರ ಗ್ರಾಮದಲ್ಲಿ 5.10 ಎಕರೆಯಲ್ಲಿ ಒ. ಮಲ್ಲಿಕಾರ್ಜುನ ಎಂಬವರು ಮರಳು ಕ್ವಾರಿ ನಡೆಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಕರಡಿಧಾಮದ ಪರಿಸರ ಸೂಕ್ಷ್ಮವಲಯವನ್ನು ಕೂಡಾ 1 ಕಿ.ಮೀಗೆ ಮಿತಿಗೊಳಿಸಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದರಿಂದ ಇಲ್ಲಿಯೂ ಗಣಿಗಾರಿಕೆಗೆ ಅನುಮತಿ ನೀಡಲು ದಾರಿ ಸುಗಮ ಆದಂತಾಗಿದೆ.

‘ಸುಪ್ರೀಂ’ ಪ್ರಕಾರ 1 ಕಿ.ಮೀ. ವರೆಗೆ ನಿಷೇಧ’
‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ವನ್ಯಜೀವಿಧಾಮದ ಕನಿಷ್ಠ 1 ಕಿ.ಮೀ.ವರೆಗೆ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಪರಿಸರ ಸೂಕ್ಷ್ಮವಲಯವನ್ನು ರಾಜ್ಯ ಸರ್ಕಾರ ಘೋಷಿಸದೇ ಇದ್ದ ಪಕ್ಷದಲ್ಲಿ, 10 ಕಿ.ಮೀ.ವರೆಗೆ ಡೀಮ್ಡ್ (ಪರಿಭಾವಿತ) ಪರಿಸರ ಸೂಕ್ಷ್ಮವಲಯ ಎಂದು ಪರಿಗಣಿಸಬೇಕು. ಡೀಮ್ಡ್‌ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯವಿದೆ’ ಎಂದು ಡಿಎಫ್‌ಒ ದೀಪಿಕಾ ಬಾಜಪೇಯಿ ತಿಳಿಸಿದರು.

‘ಈವರೆಗೆ ಪರಿಸರ ಸೂಕ್ಷ್ಮ ವಲಯ ಘೋಷಣೆ ಆಗದೇ ಇದ್ದುದರಿಂದ ನಿರಾಕ್ಷೇಪಣಾ ಪತ್ರ ಕೊಡಲು ಅವಕಾಶ ಇರಲಿಲ್ಲ. ಹೀಗಾಗಿ, ಎಲ್ಲ 24 ಪ್ರಸ್ತಾವನೆಗಳು ವರ್ಷಗಳಿಂದ ಮಂಜೂರಾತಿಗೆ ಬಾಕಿ ಇತ್ತು. ಕನಿಷ್ಠ 1 ಕಿ.ಮೀ ಇರಲೇಬೇಕೆಂದು ಇದೇ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ ಮತ್ತೆ ಸ್ಪಷ್ಟಪಡಿಸಿದ್ದು, ಕೇಂದ್ರದಿಂದಲೂ ಮಾರ್ಗಸೂಚಿ ಬಂದಿದೆ. ಎಲ್ಲ ಪ್ರಸ್ತಾವನೆಗಳು ವನ್ಯಜೀವಿಧಾಮದಿಂದ 1 ಕಿ.ಮೀ ಹೊರಗಡೆ ಇರುವುದರಿಂದ ರಾಜ್ಯ ವನ್ಯಜೀವಿ ಮಂಡಳಿಗೆ ಕಳುಹಿಸಲಾಗಿದೆ’ ಎಂದರು.

ಕಪ್ಪತಗುಡ್ಡ ವನ್ಯಜೀವಿಧಾಮದ 10 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಸಲ್ಲಿಕೆಯಾದ 24 ಪ್ರಸ್ತಾವನೆಗಳು

ಪ್ರಸ್ತಾವನೆ ಸಲ್ಲಿಸಿದವರು; ಗಣಿಗಾರಿಕೆ ಎಲ್ಲಿ;ವನ್ಯಜೀವಿಧಾಮದಿಂದ ಎಷ್ಟು ದೂರ (ಕಿ.ಮೀ)

ಶ್ರೀ ರೇಣುಕಾ ಎಂಟರ್‌ಪ್ರೈಸಸ್‌; ಲಕ್ಷ್ಮೀಶ್ವರ ತಾಲ್ಲೂಕಿನ ಸೋಗಿವಾಳ ಗ್ರಾಮದ ಸರ್ವೆ ನಂ 76/3; 4.21

ಎಸ್‌.ಆರ್‌. ಬಳ್ಳಾರಿ ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 106/2; 6

ಗಣೇಶ್ ವೈ ಬಂಕಾಪುರ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 63/1; 4.70

ನಂದಿ ಸ್ಟೋನ್ ಕ್ರಸರ್‌; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 122/1, 2,3, 4; 4.29

ವಿ.ಆರ್‌. ಬಳ್ಳಾರಿ ಆ್ಯಂಡ್‌ ಕಂಪನಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 106/1, 5 ಎಕರೆ; 5.97

ವಿ.ಆರ್‌. ಬಳ್ಳಾರಿ ಆ್ಯಂಡ್‌ ಕಂಪನಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 106/1, 5.29 ಎಕರೆ; 5.95

ಎಸ್‌.ಎಚ್‌. ಪಾಟೀಲ್; ಗದಗ ತಾಲ್ಲೂಕಿನ ಶೀತಾಲಹರಿ ಗ್ರಾಮದ ಸರ್ವೆ ನಂ 67/2; 3.60

ಶ್ರೀನಿವಾಸರಾವ್‌ ಎಸ್‌. ಲಿಂಗನಮನೇನಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 116/3; 4.77

ಶ್ರೀನಿವಾಸರಾವ್‌ ಎಸ್‌. ಲಿಂಗನಮನೇನಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 116/3,7; 4.77

ಬಸವೇಶ್ವರ ಎಂ–ಸ್ಯಾಂಡ್‌, ಸ್ಟೋನ್‌ ಕ್ರಸರ್‌; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 108/2,7,8,10ರಲ್ಲಿ 10.10 ಎಕರೆ; 5.69

ಆದಿಶಕ್ತಿ ಸ್ಟೋನ್‌ ಕ್ರಸರ್‌; ಶಿರಹಟ್ಟಿ ತಾಲ್ಲೂಕಿನ ಪರಸರಪುರ ಗ್ರಾಮದ ಸರ್ವೆ ನಂ 78/2,; 1.10

ಎಸ್‌.ಎಂ. ಪಾಟೀಲ; ಲಕ್ಷ್ಮೀಶ್ವರ ತಾಲ್ಲೂಕಿನ ಸೋಗಿವಾಳ ಗ್ರಾಮದ ಸರ್ವೆ ನಂ 74/6; 3.81

ಆನಂದ್ ಎಂ ನಾಡಗೌಡರ್‌; ಮುಂಡರಗಿ ತಾಲ್ಲೂಕಿನ ಬರದೂರು ಗ್ರಾಮದ ಸರ್ವೆ ನಂ 218/7; 8

ನಂದಿ ಸ್ಟೋನ್ ಕ್ರಸರ್‌; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 75/1ಎ/1,2, 1ಬಿ, 1ಸಿ; 4.26

ರಾಜಪ್ಪ ಎಸ್‌ ಹಲಗಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 77/1; 4.80

ವಿಜಯಲಕ್ಷ್ಮಿ ಸ್ಟೋನ್‌ ಕ್ರಷರ್; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 98/2; 5.56

ಸಿದ್ದೇಶ್ವರ ಸ್ಟೋನ್‌ ಕ್ರಷರ್‌ (ಜ್ಯೋತಿ ಜಿ. ಬಂಕಾಪುರ) ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 63/1,2,3ರಲ್ಲಿ 5 ಎಕರೆ; 4.79

ಸಿದ್ದೇಶ್ವರ ಸ್ಟೋನ್‌ ಕ್ರಷರ್‌ (ಗಣೇಶ್ ವೈ. ಬಂಕಾಪುರ) ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 63/1,2,3ರಲ್ಲಿ 4 ಎಕರೆ; 4.73

ಬಸವರಾಜ್‌ ಎಸ್‌. ರಾಯಪುರ; ಶಿರಹಟ್ಟಿ ತಾಲ್ಲೂಕಿನ ಮಾಗಡಿ ಗ್ರಾಮದ ಸರ್ವೆ ನಂ 94/2; 1.004

ಪ್ರಕಾಶ್‌ ಜಿ. ಹೆಗ್ಡೆ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದಸರ್ವೆ ನಂ 126/1, 2; 4.75

ರಾಜಶೇಖರ ಆರ್‌ ಗರಗ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 113/1; 5.60

ರಾಜಶೇಖರ ಆರ್‌ ಗರಗ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 107/1ರಲ್ಲಿ 3.18 ಎಕರೆ; 5.85

ನಿಲೇಶ್‌ ಜಿ. ಮದರಕಂಡಿ; ಶಿರಹಟ್ಟಿ ತಾಲ್ಲೂಕಿನ ಚಿಕ್ಕಸವಣೂರು ಗ್ರಾಮದ ಸರ್ವೆ ನಂ 119/2,3,4,5,6,7,8ರಲ್ಲಿ; 4.64

ಮಹಮ್ಮದ್‌ಗೌಸ್‌ ಎಂ. ಗಾಡಗೋಳಿ; ಲಕ್ಷ್ಮೀಶ್ವರ ತಾಲ್ಲೂಕಿನ ಹುಲ್ಲೂರು ಗ್ರಾಮದ ಸರ್ವೆ ನಂ 47/1; 8.51

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT