ಶುಕ್ರವಾರ, ಸೆಪ್ಟೆಂಬರ್ 17, 2021
22 °C

ರಾಹುಲ್‌ ಅವರೇ, ನೀವು ಜುಲೈನಲ್ಲೇ ಲಸಿಕೆ ಪಡೆದಿದ್ದೀರಂತೆ ಹೌದಾ? ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಹುಲ್‌ ಗಾಂಧಿ ಅವರೇ, ಜುಲೈನಲ್ಲಿ 13 ಕೋಟಿ ಭಾರತೀಯರೊಂದಿಗೆ ನೀವು ಲಸಿಕೆ ಹಾಕಿಸಿಕೊಂಡಿದ್ದೀರಂತೆ ನಿಜವೇ? ಎಂದು ಪ್ರಶ್ನೆ ಮಾಡಿರುವ ಕರ್ನಾಟಕ ಬಿಜೆಪಿ, ಅದಕ್ಕೆ ಸಂಬಂಧಿಸಿಂತೆ ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ ಕಡೆಗೆ ಎಸೆದಿದೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮೂರು ದಿನಗಳ ಹಿಂದೆ ಲಸಿಕೆ ಹಾಕಿಸಿಕೊಂಡಿರುವುದಾಗಿಯೂ, ಅದೇ ಕಾರಣಕ್ಕೆ ಅವರು ಸಂಸತ್‌ ಕಲಾಪಕ್ಕೆ ಗೈರಾಗಿರುವುದಾಗಿಯೂ ಮೂಲಗಳ ಮಾಹಿತಿ ಉಲ್ಲೇಖಿಸಿ ರಾಷ್ಟ್ರ ಮಟ್ಟದ ಸುದ್ದಿ ಮಾಧ್ಯಮಗಳು ಜುಲೈ 31ರಂದು ವರದಿ ಮಾಡಿದ್ದವು. 

ಇದೇ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ರಾಹುಲ್‌ ಗಾಂಧಿ ಅವರನ್ನು ಬಿಜೆಪಿ ಟೀಕಿಸಿದೆ. ‘ಒಂದು ವೇಳೆ ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ ಎಂದಾದರೆ, ಇಲ್ಲಿ ವರೆಗೆ ನೀವು ಯಾಕೆ ವಿಷಯ ಬಹಿರಂಗಗೊಳಿಸಿಲ್ಲ. ಲಸಿಕೆ ಪಡೆದಿದ್ದನ್ನು ಹೇಳಿ  ನಿಮ್ಮ ಹಿಂಬಾಲಕರಿಗೆ ಪ್ರೇರಣೆ ಆಗಬಹುದಿತ್ತಲ್ಲವೇ? ಎಂದು ಬಿಜೆಪಿ ಕೇಳಿದೆ. 

‘ಅಥವಾ, ನಿಮ್ಮ ಹಾಸ್ಯ ನಟನೆಯೊಂದಿಗೆ ನಿಮ್ಮ ಹಿಂಬಾಲಕರನ್ನು ರಂಜಿಸುವುದರಲ್ಲೇ ನೀವು ಸಂತೋಷವಾಗಿದ್ದೀರಾ’ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. 

ಲಸಿಕೆ ಲಭ್ಯತೆ, ಹಂಚಿಕೆ ಕುರಿತಂತೆ ಆಡಳಿತರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾರಿ ವಾಗ್ವಾದಗಳು ನಡೆದಿವೆ. ಈ ಚರ್ಚೆಗಳನ್ನು ಬಿಜೆಪಿ ಮತ್ತಷ್ಟು ವಿಸ್ತರಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು