ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಕನಾಡಿ ಗರಡಿಗೆ 150ರ ಸಂಭ್ರಮ: ನಾಗಬ್ರಹ್ಮ ಮಂಡಲೋತ್ಸವ ಸಂಪನ್ನ

Last Updated 8 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ 150ನೇ ವರ್ಷಾಚರಣೆಯು ನಾಗಬ್ರಹ್ಮ ಮಂಡಲೋತ್ಸವದೊಂದಿಗೆ ಬುಧವಾರ ಬೆಳಿಗ್ಗೆ ಸಂಪನ್ನಗೊಂಡಿತು.

ಕಂಕನಾಡಿ ಕ್ಷೇತ್ರದಲ್ಲಿ ಫಲಪುಷ್ಪಗಳಿಂದ ಅಲಂಕೃತವಾಗಿದ್ದ ಭವ್ಯವೇದಿಕೆಯಲ್ಲಿ ಮನೋಜ್‌ ಶಾಂತಿ ಮತ್ತು ಬಳಗದವರು ನಾಗಬ್ರಹ್ಮ ಮಂಡಲೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇದಕ್ಕೂ ಮುನ್ನ ಕ್ಷೇತ್ರದಲ್ಲಿ ಹಾಲಿಟ್ಟು ಸೇವೆ ನಡೆಯಿತು.

ಕರಾವಳಿಯಾದ್ಯಂತ ನಡೆಯುವ ನಾಗಮಂಡಲೋತ್ಸವವನ್ನು ಬ್ರಾಹ್ಮಣ ಸಮುದಾಯವರೇ ಹೆಚ್ಚಾಗಿ ನೆರವೇರಿಸುತ್ತಾರೆ. ಕಂಕನಾಡಿ ಕ್ಷೇತ್ರದ ನಾಗಬ್ರಹ್ಮ ಮಂಡಲೋತ್ಸವವನ್ನು ಬಿಲ್ಲವ ಸಮುದಾಯದ ನಾಗಪಾತ್ರಿ ಮನೋಜ್‌ ಶಾಂತಿ ಮತ್ತು ಬಳಗದವರು ನಿರ್ವಹಿಸಿದರು.

ಕ್ಷೇತ್ರಕ್ಕೆ 150 ವರ್ಷ ತುಂಬಿದ ಸಲುವಾಗಿ ಮಾ.3ರಿಂದ ಸಹಸ್ರ ನಾರಿಕೇಳ ಗಣಯಾಗ, ಬ್ರಹ್ಮ ಬೈದರ್ಕಳರಿಗೆ ಸಹಸ್ರ ಕುಂಭಾಭಿಷೇಕ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಮಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಗರಡಿಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT