ಮಂಗಳವಾರ, ಜೂನ್ 28, 2022
23 °C
ಗಂಜಿ ಹುಡುಕುತ್ತಿರುವ ಕಾಂಗ್ರೆಸ್‌, ಜೆಡಿಎಸ್‌: ಶಾಸಕ ರಮೇಶ್ ಕುಮಾರ್ ಟೀಕೆ

‘ಪಠ್ಯದಲ್ಲಿ ಹೆಡಗೇವಾರ್‌: ಕಾಂಗ್ರೆಸ್‌ ಪ್ರತಿಭಟಿಸದಿರುವುದು ಸೋಜಿಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ‘ರಾಷ್ಟ್ರಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದ ಮತ್ತು ಕೋಮುವಾದವನ್ನು ಜೀವಾಳ ಮಾಡಿಕೊಂಡಿದ್ದ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ವಿಚಾರಗಳು ಪಠ್ಯ ಸೇರುತ್ತಿದ್ದರೂ ಕಾಂಗ್ರೆಸ್ ಪಕ್ಷ ಪ್ರತಿಭಟಿಸದಿರುವುದು ಸೋಜಿಗ’ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಓದುವ ಪಠ್ಯಪುಸ್ತಕಗಳಲ್ಲಿ ಕೋಮುವಾದಿಗಳ ಅಟ್ಟಹಾಸ ಮೆರೆಯುತ್ತಿದೆ ಎಂದರು.

‘ಮಕ್ಕಳಿಗೆ ವಿಷ ಉಣಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆ ಹೊತ್ತಿನ ಗಂಜಿ ಹುಡುಕಿಕೊಳ್ಳುತ್ತಿವೆ. ಈ ಪಕ್ಷಗಳಿಗೆ ಕೇವಲ ಹೊತ್ತು ಹೊತ್ತಿಗೆ ಗಂಜಿಯೇ ಮುಖ್ಯವಾಗಿದೆ’ ಎಂದು ಅವರು ಅಸಮಾಧಾನ ಹೊರಹಾಕಿದರು.

‘ದೇಶದ ಆಡಳಿತ ಇಂದು ಬಹುವೇಷ ತೊಟ್ಟವರು, ಬಹುಮೂರ್ತಿಗಳದ್ದೇ ಆಗಿದೆ. ಜನಹಿತಕ್ಕಿಂತ ಜನರನ್ನು ಮರುಳುಮಾಡುವ ಮಾತುಗಳೇ ಅಧಿಕವಾಗಿವೆ. ಇದೊಂದು ಬುಡುಬುಡಿಕೆ ಆಳ್ವಿಕೆ’ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು