ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿದು ತಿಳಿದಿರಲಿ: ಕರ್ನಾಟಕ ಚುನಾವಣೆ 2023 ವಿಶೇಷಗಳೇನು?

Last Updated 29 ಮಾರ್ಚ್ 2023, 10:58 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಗೆ ಚುನಾವಣೆಯನ್ನು ಮೇ 10ಕ್ಕೆ ನಿಗದಿ ಪಡಿಸಿದ್ದು, ಈ ಬಾರಿಯ ಚುನಾವಣೆಯ ವಿಶೇಷಗಳೇನು ಎಂಬ ಮಾಹಿತಿ ಇಲ್ಲಿದೆ.

ರಾಜ್ಯದಾದ್ಯಂತ 52,283 ಮತಗಟ್ಟೆಗಳಲ್ಲಿ 24,063 ನಗರ ಪ್ರದೇಶ ಹಾಗೂ 34,219 ಗ್ರಾಮೀಣ ಮತಗಟ್ಟೆಗಳು ಇವೆ. ಸರಾಸರಿ 888 ಮತದಾರರಿಗೊಂದು ಮತಗಟ್ಟೆಯು ಬರುತ್ತದೆ. 12,000 ಸೂಕ್ಷ್ಮ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಈ ಸಾಲಿನ ರಾಜ್ಯ ಚುನಾವಣೆಯ ಮುಖ್ಯ ವಿಶೇಷಗಳೆಂದರೆ:

* ರಾಜ್ಯದಲ್ಲಿ ಒಟ್ಟು 224 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
* ಚುನಾವಣೆಯು ಒಟ್ಟು 5.22 ಕೋಟಿ ಮತದಾರರನ್ನು ಹೊಂದಿದೆ.
* ಇದರಲ್ಲಿ 2,62,42,561 ಕೋಟಿ ಪುರುಷ ಹಾಗೂ 2,59,26,319 ಕೋಟಿ ಮಹಿಳಾ ಮತದಾರರಿದ್ದಾರೆ.
* ಈ ಸಾಲಿನಲ್ಲಿ ಮೊದಲ ಬಾರಿ ಮತ ಚಲಾಯಿಸುವ 9,17,241 ಹೊಸ ಮತದಾರರಿದ್ದು, ಇದರಲ್ಲಿ ಏ.1ಕ್ಕೆ 18 ವರ್ಷ ತುಂಬುವ ಹೊಸ ಮತದಾರರ ಸಂಖ್ಯೆ 1.25 ಲಕ್ಷ.
* 80 ವರ್ಷ ಮೇಲ್ಪಟ್ಟ 12,15,763 ಲಕ್ಷ ಮತದಾರರಿದ್ದು, ಅವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ.
* 5,55,073 ಲಕ್ಷ ದಿವ್ಯಾಂಗ ಮತದಾರರು ಹಾಗೂ 4,699 ತೃತೀಯ ಲಿಂಗಿ ಮತದಾರರಿದ್ದಾರೆ.
* ಮತದಾನದ ಸಂದರ್ಭ ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆಗಳಿರಲಿದ್ದು ಮಹಿಳೆಯರಿಗಾಗಿ 1,320 ಮತಗಟ್ಟೆಗಳಿರಲಿವೆ.

* ಚುನಾವಣಾ ಅಕ್ರಮ ತಡೆಗೆ 2,400 ತಂಡಗಳ ರಚನೆಯಾಗಿದ್ದು, ಸಲ್ಲಿಕೆಯಾದ ದೂರುಗಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಭರವಸೆ.

ಚುನಾವಣಾ ಆ್ಯಪ್:
ಚುನಾವಣಾ ವಿಚಾರಕ್ಕೆ ಸಂಬಂಧಿಸಿ ಆಯೋಗವು ’ಕೆವೈಸಿ’ (know your candidate)ಆ್ಯಪ್ ಮತ್ತು ’ಸಿವಿಜಿಲ್’(CVIGIL) ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಇದರ ವಿಶೇಷತೆಗಳೆಂದರೆ:
* ’ಕೆವೈಸಿ’ ಆ್ಯಪ್ ಮೂಲಕ ಚುನಾವಣಾ ಅಭ್ಯರ್ಥಿಯ ವಿವರಗಳ ಜತೆಗೆ ಅವರ ಅಫಿಡವಿಟ್ ಲಭ್ಯ.
* ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ’ಸಿವಿಜಿಲ್’ ಆ್ಯಪ್‌ ಮೂಲಕ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT