ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಸರಿ ಶಾಲು ಹಂಚುವ ಬಿಜೆಪಿಗೆ ಶಿಕ್ಷಣ ವ್ಯವಸ್ಥೆ ಬಗ್ಗೆ ಅರಿವಿಲ್ಲ: ಕಾಂಗ್ರೆಸ್

ಅಕ್ಷರ ಗಾತ್ರ

ಬೆಂಗಳೂರು: ತ್ರಿಶೂಲ ದೀಕ್ಷೆ, ಕೇಸರಿ ಶಾಲು ಹಂಚುವ ಬಿಜೆಪಿಯವರಿಗೆ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅರಿವಿಲ್ಲ ಎಂದುಕಾಂಗ್ರೆಸ್‌ ಟೀಕಿಸಿದೆ.

ಶಿಕ್ಷಣ ವ್ಯವಸ್ಥೆ, ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

‘ಸರ್ಕಾರ ಬಡವರ, ದಲಿತರ, ಹಿಂದುಳಿದವರ ಮಕ್ಕಳಿಗೆ ಶಿಕ್ಷಣವನ್ನು ವಂಚಿಸಿ ಸಂಘಪರಿವಾರದ ಕಾಲಾಳುಗಳನ್ನಾಗಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ತ್ರಿಶೂಲ ದೀಕ್ಷೆ ನೀಡುವ, ಕೇಸರಿ ಶಾಲು ಹಂಚುವವರಿಗೆ ಶಿಕ್ಷಣದ ಪೂರಕ ವ್ಯವಸ್ಥೆ ಮಾಡುವ ಮನಸ್ಸಿಲ್ಲ. ರಾಜ್ಯದ ವ್ಯವಸ್ಥೆಗಳೆಲ್ಲವನ್ನೂ ಅಧೋಗತಿಗೆ ಇಳಿಸಿದ್ದೆ 40 ಪರ್ಸೆಂಟ್ ಲೂಟಿಯ ಬಿಜೆಪಿ ಸರ್ಕಾರದ ಸಾಧನೆ’ ಎಂದು ಕಾಂಗ್ರೆಸ್‌ ಗುಡುಗಿದೆ.

‘ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಗೆ ಬೆಲೆ ಏರಿಕೆಯ ಬಗ್ಗೆ ಬಹಳ ಕಾಳಜಿ ಇತ್ತು! ಸಣ್ಣ ಬೆಲೆ ಏರಿಕೆಗೂ ಅವರ ಪ್ರತಿಭಟನೆ ಏನು, ಅವರ ಹೋರಾಟವೇನು, ಅವರ ಅರಚಾಟವೇನು! ಈಗ ಎಲ್ಲಿ ಹೋಗಿದೆ ಆ ವೀರಾವೇಶ? ಬಿಜೆಪಿ ಸರ್ಕಾರ ಭಾರತದಲ್ಲೂ 'ಶ್ರೀಲಂಕಾ ಮಾಡೆಲ್' ಸ್ಥಾಪಿಸುತ್ತಿದೆ. ಹೀಗೆಯೇ ಮುಂದುವರಿದಲ್ಲಿ ಇಲ್ಲೂ ಶ್ರೀಲಂಕಾ ಸ್ಥಿತಿ ಬರಲಿದೆ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

‘ಐಟಿ ಸಿಟಿ ಬೆಂಗಳೂರು ನೀರಿನಲ್ಲಿ ಮುಳುಗಿದೆ. ರಸ್ತೆಗಳು ಈಜುಕೊಳಗಳಾಗಿ ಮಾರ್ಪಟ್ಟಿವೆ. ಕಾರುಗಳು ತೇಲುತ್ತಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮೂಲಸೌಕರ್ಯಗಳನ್ನು ಒದಗಿಸಲು ಬಿಜೆಪಿ ಸರ್ಕಾರ ಶೇ 40 ಪರ್ಸೆಂಟ್ ಕಮಿಷನ್‌ಗಾಗಿ ಕಾಯುತ್ತಿದೆಯೇ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

‘ಬೊಮ್ಮಾಯಿ ಅವರ ಕಲ್ಲು ಹೃದಯದ ಸರ್ಕಾರಕ್ಕೆ 42,000 ಆಶಾ ಕಾರ್ಯಕರ್ತೆಯರ ಗೋಳು ಕೇಳುತ್ತಿಲ್ಲವೇ?, ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚು ಮಾಡಿಲ್ಲ ಹಾಗೂ ಸಂಬಳವೂ ಸಹ ಸರಿಯಾಗಿ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಶೇ 40 ಪರ್ಸೆಂಟ್ ಕಮಿಷನ್ ಸರ್ಕಾರವೆಂದು ಎಲ್ಲರಿಗೂ ತಿಳಿದಿದೆ ಈಗ ಇವರ ಬೇಡಿಕೆಗಳ ಈಡೇರಿಕೆಗಾಗಿ ಶೇ 40 ಪರ್ಸೆಂಟ್ ಕಮಿಷನ್ ನೀಡಬೇಕೇ’ ಎಂದು ಸುರ್ಜೇವಾಲಾ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT