ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಡಕೋಟಾ ಇಂಜಿನ್‌ ಸರ್ಕಾರ ಎಂದಿಗೂ ಟೇಕಾಫ್‌ ಆಗದು: ಕಾಂಗ್ರೆಸ್

Last Updated 20 ಆಗಸ್ಟ್ 2021, 7:48 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯ ಡಕೋಟಾ ಇಂಜಿನ್‌ ಸರ್ಕಾರ ಎಂದಿಗೂ ಟೇಕಾಫ್‌ ಆಗುವುದಿಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್, ‘ಕೆಲವರಿಗೆ ಇಷ್ಟವಿಲ್ಲದ ಖಾತೆಯನ್ನು ಕೊಡಲಾಗಿದೆ. ಇನ್ನು ಕೆಲವರಿಗೆ ಕಷ್ಟವಾಗುವ ಖಾತೆ ಸಿಕ್ಕಿದೆ. ಸಚಿವರಿಗೆ ತಮ್ಮ ಖಾತೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಿರುವಾಗ ಅವರು ತಮ್ಮ ಖಾತೆಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡುವುದು ದೂರದ ಮಾತು. ಒಟ್ಟಿನಲ್ಲಿ ರಾಜ್ಯದ ಅಭಿವೃದ್ದಿ ಮರೀಚಿಕೆ’ ಎಂದು ವ್ಯಂಗ್ಯವಾಡಿದೆ.

‘ಕೋವಿಡ್ 2ನೇ ಅಲೆಯನ್ನು ಆಹ್ವಾನಿಸಿದ್ದು ಬಿಜೆಪಿಯ ಉಪಚುನಾವಣಾ ಜಾತ್ರೆ. ಕೋವಿಡ್ 3ನೇ ಅಲೆಯನ್ನು ಆಹ್ವಾನಿಸುತ್ತಿರುವುದು ಬಿಜೆಪಿಯ ಜನಾಶೀರ್ವಾದಯಾತ್ರೆ. ಕೋವಿಡ್‌ನಿಂದ ಜನರನ್ನು ರಕ್ಷಸಬೇಕಿದ್ದ ಬಿಜೆಪಿ ಸರ್ಕಾರ ತನ್ನ ಭ್ರಷ್ಟಾಚಾರ ಮತ್ತು ರಾಜಕೀಯ ಹಿತಾಸಕ್ತಿಗಾಗಿ ರಾಜ್ಯವನ್ನು ದುರಂತಕ್ಕೆ ತಳ್ಳಿತ್ತು, ಮುಂದೆಯೂ ತಳ್ಳಲಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಕಳೆದ 3 ದಿನಗಳಿಂದ ವಿಜೆಪಿ ಜನಾಶೀರ್ವಾದಯಾತ್ರೆ ನಡೆಸುತ್ತಾ ಪ್ರತಿದಿನವೂ, ಪ್ರತಿ ಕ್ಷಣವೂ ಸರ್ಕಾರವೇ ಜಾರಿಗೊಳಿಸಿದ ಕೋವಿಡ್ ನಿಯಮ ಉಲ್ಲಂಘಿಸುತ್ತಿದೆ. ಗೃಹ ಸಚಿವರೇ, ಇದುವರೆಗೂ ಎಷ್ಟು ಪ್ರಕರಣ ದಾಖಲಾಗಿದೆ?, ಬಿಜೆಪಿ ಅಧ್ಯಕ್ಷರನ್ನು ಹೊಣೆ ಮಾಡಲಾಗಿದೆಯೇ?, ಪೊಲೀಸರು ಯಾತ್ರೆಯ ನಿಯಮ ಉಲ್ಲಂಘನೆಯನ್ನು ತಡೆಯುವ ಯತ್ನ ಮಾಡಲಿಲ್ಲವೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT